ಇನ್ನು ಮುಂದೆ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಊಟ ಹಾಕುವಂತಿಲ್ಲ. ಬೀದಿ ನಾಯಿಗಳಿಗೆ ಊಟ ಹಾಕಲು ವೇಳಾಪಟ್ಟಿ ನಿಗದಿ ಮಾಡಲು ಬಿಬಿಎಂಪಿ ಉದ್ದೇಶಿಸಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಬಗ್ಗೆಯೂ ಪಾಲಿಕೆ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಪಾಲಿಕೆ ಚಿಂತಿಸಿದೆ.
ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರದಲ್ಲಿ ನಿಯಮ ರೂಪಿಸುವಂತೆ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಒತ್ತಾಯಿಸಿದ್ದವು.
ಅಪಾರ್ಟ್‌ಮೆಂಟ್ ನಿವಾಸಿಗಳು ನಾಯಿಗಳಿಗೆ ಊಟ ಹಾಕುವ ವಿಚಾರ ಹಲವು ಬಾರಿ ವಿವಾದಕ್ಕೆ ಕಾರಣವಾಗಿದ್ದವು.
ಕೆಲ ಬಾರಿ ನಿವಾಸಿಗಳ ನಡುವೆ, ಇನ್ನು ಕೆಲವೊಮ್ಮೆ ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಪ್ರಾಣಿಪ್ರಿಯರ ನಡುವೆ ವಿವಾದ ಉಂಟಾಗಿದ್ದವು. ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವುದರಿಂದ ನಗರದ ಸೌಂದರ್ಯಕ್ಕೂ ಧಕ್ಕೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಪಶು ಸಂಗೋಪನೆ ಇಲಾಖೆ ನಿಯಮ ರೂಪಿಸಲು ಮುಂದಾಗಿದೆ.
ಹಂತ ಹಂತವಾಗಿ ಅನುಷ್ಠಾನ
ರಾತ್ರಿ 10 ಗಂಟೆ ನಂತರ ಹಲವೆಡೆ ಜನಸಂದಣಿ ಕಡಿಮೆಯಿರುತ್ತದೆ. ಹೀಗಾಗಿ, ಬೀದಿ ನಾಯಿಗಳಿಗೆ ರಾತ್ರಿ 10 ಗಂಟೆಗೆ ಊಟ ಹಾಕುವಂತೆ ಅಪಾರ್ಟ್‌ಮೆಂಟ್‌ಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು.
ಅದೇ ರೀತಿ ಸಾರ್ವಜನಿಕ ಸ್ಥಳಗಳ ಸ್ಥಿತಿ-ಗತಿಗಳನ್ನು ಅರಿತು ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ಅಲ್ಲಿಯೇ ಊಟ, ತಿಂಡಿ ಹಾಕುವಂತೆ ಫಲಕಗಳನ್ನು ಅಳವಡಿಸಲಾಗುವುದು.
Post a comment
Log in to write reviews