ಬೀದರ್ ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದ ವನಮಾರಪಳ್ಳಿ ಬಳಿ 15 ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಎನ್.ಸಿ.ಬಿ ತಂಡ ಮತ್ತು ಜಿಲ್ಲಾ ಪೊಲೀಸ್ ಜಂಟಿ ಕಾರ್ಯಚಾರಣೆ ನಡೆಸಿ ಗಾಂಜಾ ಸಾಗಣೆ ಮಾಡುತ್ತಿದ್ದ ಲಾರಿ ವಶಪಡಿಸಿಕೊಂಡಿದ್ದಾರೆ.
ಓಡಿಶಾ ರಾಜ್ಯದ ಮಲ್ಕಾನ್ಗಿರಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ತುಂಬಿಕೊಂಡು ಮಹಾರಾಷ್ಟ್ರಕ್ಕೆ ಸಾಗಿಸುತ್ತಿರುವ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ಎನ್.ಸಿ.ಬಿ ಬೆಂಗಳೂರು ತಂಡ ಹಿಂಬಾಲಿಸಿದ್ದು, ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ಲಾರಿ ವಶಪಡಿಸಿಕೊಂಡಿದ್ದಾರೆ.
ಲಾರಿ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಔರಾದ್ ಠಾಣೆಗೆ ಕರೆತಂದು ಪರಿಶೀಲನೆ ಮಾಡಿದಾಗ ಲಾರಿ ಮೇಲೆ ಸಿಮೆಂಟ್ ಇಟ್ಟಿಗೆ ತುಂಬಿದ್ದು, ಒಳಗಡೆ ಗಾಂಜಾ ಪ್ಯಾಕೇಟ್ ಗಳನ್ನು ಅಡಗಿಸಿಟ್ಟಿದ್ದು ಸಿಕ್ಕಿಬಿದ್ದಿದೆ.
ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಂದಿಕೇರಾ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ. ಬೆಂಗಳೂರು ಎನ್.ಸಿ.ಬಿ ತಂಡ ಜಪ್ತಿಯಲ್ಲಿ 1500 ಕೆಜಿ ಗಾಂಜಾ ಹಾಗು ಅಂದಾಜು 15 ಕೋಟಿ ರೂ ವಶಪಡಿಸಿಕೊಂಡಿದೆ.
Tags:
- India News
- Kannada News
- 1 crore worth of ganja seized
- 1 crore worth of ganja seized in bhadradri kothagudem
- transporting marijuana
- police caught ganja gang
- illegal transport
- police seized ganja
- rajiv gandhi international airport seized the gold
- illegal transport at peak
- police seized 350 kgs ganja
- youth gang arrest in ganjai
- ganja seized in bhadradri kothagudem
- ganja seized in bhadrachalam
- ganja seized
- thieves robbed gold in nellore
- ganja gang in sangareddy
Post a comment
Log in to write reviews