Samayanews.

Samayanews.

2024-12-24 12:21:21

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನನ್ನ ಆರಾಧ್ಯ ದಯವ ಇವರೇ ಎಂದ ಯುವತಿ; ಸೋನು ಸೊದ್

ಆಂಧ್ರಪ್ರದೇಶದ ದೇವಿ ಕುಮಾರಿ ಬಿಎಎಸ್ಸಿ ಓದುವ ಕನಸು ಕಾಣುತ್ತಿದ್ದರು. ಆದರೆ ಕುಟುಂಬದ ಆರ್ಥಿಕ ಸ್ಥಿತಿ ಆಕೆಯ ವ್ಯಾಸಂಗಕ್ಕೆ ಪೂರಕವಾಗಿರಲಿಲ್ಲ.ಈ ಬಗ್ಗೆ ಅಜಯ್ ಡೇವಿಡ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸೋನು ಸೂದ್ ಬಳಿ ಮನವಿ ಮಾಡಿದ್ದರು. ಇದಕ್ಕೆ ಸೋನು ಸೂದ್ ಉತ್ತರಿಸಿದ್ದಾರೆ.

ಬಾಲಿವುಡ್ನ ಖ್ಯಾತ ನಟ ಸೋನು ಸೂದ್ ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬಡ ವಿದ್ಯಾರ್ಥಿನಿಗೆ ಅವರು ಸಹಾಯ ಮಾಡಿದ್ದಾರೆ. ಈ ಮೂಲಕ ಅವರು ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್ ಜನರ ಸಹಾಯಕ್ಕೆ ನಿಂತರು. ಅಲ್ಲಿಂದ ಇಲ್ಲಿಯವರೆಗೆ ಅವರು ಸಾಮಾಜಿಕ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಸ್ಪರಿ ಮಂಡಲದ ಬಾಣವನೂರಿನ ದೇವಿ ಕುಮಾರಿ ಬಿಎಎಸ್ಸಿ ಓದುವ ಕನಸು ಕಾಣುತ್ತಿದ್ದರು. ಆದರೆ ಕುಟುಂಬದ ಆರ್ಥಿಕ ಸ್ಥಿತಿ ಆಕೆಯ ವ್ಯಾಸಂಗಕ್ಕೆ ಪೂರಕವಾಗಿರಲಿಲ್ಲ. ಈ ಬಗ್ಗೆ ಅಜಯ್ ಡೇವಿಡ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸೋನು ಸೂದ್ ಬಳಿ ಮನವಿ ಮಾಡಿದ್ದರು. ಸಹಾಯ ಮಾಡುವಂತೆ ಕೋರಿದ್ದರು
ಇದನ್ನು ನೋಡಿದ ಸೋನು ಸೂದ್ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ‘ಯಾವುದೇ ಸಂದರ್ಭದಲ್ಲೂ ನಿಮ್ಮ ಅಧ್ಯಯನವನ್ನು ನಿಲ್ಲಿಸಬೇಡಿ. ಕಾಲೇಜಿಗೆ ಹೋಗಲು ಸಿದ್ಧರಾಗಿರಿ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು. ಈಗ ಕೊಟ್ಟ ಮಾತಿನಂತೆ ಸೋನು ಸೂದ್ ದೇವಿ ಕುಮಾರಿಯ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡಿದ್ದಾರೆ. ಇದರಿಂದ ಮನೆಯಲ್ಲಿ ವಿದ್ಯಾರ್ಥಿನಿಯರ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ.
ಸೋನು ಸೂದ್ ಅವರ ಭಾವಚಿತ್ರವನ್ನು ಪ್ರಿಂಟ್ ಮಾಡಿಸಿ ಅದನ್ನು ಹಿಡಿದು ದೇವಿ ಕುಮಾರಿ ಅವರು ಧನ್ಯವಾದ ಹೇಳಿದ್ದಾರೆ. ‘ನಮ್ಮ ಕುಟುಂಬ ಆರ್ಥಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ನನಗೆ ಅಧ್ಯಯನದಲ್ಲಿ ತುಂಬಾ ಆಸಕ್ತಿ. ಮನೆಯ ಪರಿಸ್ಥಿತಿಯಿಂದಾಗಿ ನನ್ನ ತಂದೆ ತಾಯಿ ನನ್ನ ಓದನ್ನು ಮಧ್ಯದಲ್ಲಿ ನಿಲ್ಲಿಸಲು ಬಯಸಿದ್ದರು. ನನ್ನ ಕನಸುಗಳೆಲ್ಲ ಕರಗಿತು ಎಂದು ಬೇಸರದಲ್ಲಿ ಇದ್ದೆ. ಅಂತಹ ಸಮಯದಲ್ಲಿ ಸೋನು ಸೂದ್ ಅವರು ನನ್ನ ಬೆಂಬಲಕ್ಕೆ ನಿಂತರು. ಅವರು ನನ್ನ ಅಧ್ಯಯನಕ್ಕೆ ಬೇಕಾದ ಸಹಾಯವನ್ನು ಮಾಡಿದರು. ಅವರೀಗ ನನಗೆ ದೇವರ ಸಮಾನ’ ಎಂದು ದೇವಿ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ.

img
Author

Post a comment

No Reviews