ಉತ್ತರ ಕನ್ನಡ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿ ಥಳಿಸಿದ ಘಟನೆ ಜಿಲ್ಲೆಯ ಕಾರವಾರದ ಠಾಗೋರ ಕಡಲ ತೀರದಲ್ಲಿ ನಡೆದಿದೆ.
ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಸಮುದ್ರಕ್ಕಿಳಿಯಲು ಅವಕಾಶ ನಿಷೇದಿಸಲಾಗಿದೆ. ಆದರೆ, ಬೆಳಂಬೆಳಿಗ್ಗೆ ಕುಡಿದು ಸಮುದ್ರಕ್ಕೆ ಇಳಿದ ಇಬ್ಬರು ಲೈಫ್ ಗಾರ್ಡ್ ಎಷ್ಟೆ ಕೂಗಿದರೂ ಸ್ಪಂದಿಸದೆ ನೀರಲ್ಲಿ ಕುಳಿತು ಹುಚ್ಚಾಟ ಮೆರೆದಿದ್ದಾರೆ. ನಂತರ ಅವನನ್ನ ದಡಕ್ಕೆ ಕರೆತಂದ ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿ ಥಳಿಸಿ ಬುದ್ದಿ ಹೇಳಿದ್ದಾರೆ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಸಮುದ್ರದೋಳಗೆ ಎಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಕಡಲ ತೀರದಲ್ಲೂ ಮೀನುಗಾರಿಕೆಗೆ ನಿಷೇಧ ಮಾಡಲಾಗಿದೆ.
Post a comment
Log in to write reviews