ಬೆಂಗಳೂರು:ಮೆಟ್ರೋ ಸಂಚಾರ ಸದ್ಯ ಸ್ಥಗಿತಗೊಂಡಿದೆ. ಇದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗದ ಕಾರಣ ಸಾವಿರಾರು ಪ್ರಯಾಣಿಕರು ಪರದಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಹೌದು… ರಾಜ್ಯ ರಾಜಧಾನಿಯಾದ ನಮ್ಮ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದಿನಿಂದ ಮೂರು ದಿನ ಪೀಣ್ಯ ಟು ಮಾದಾವರ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದು, ಪೀಣ್ಯ ಇಂಡ್ರಸ್ಟಿ ಮತ್ತು ನಾಗಸಂದ್ರ ನಡುವೆ ಆಗಸ್ಟ್ 20, 23 ಮತ್ತು 30 ರಂದು ಮೆಟ್ರೋ ಸಂಚಾರ ಸ್ಥಗಿತವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳುಮಾಹಿತಿ ನೀಡಿದ್ದಾರೆ.
ನಾಗಸಂದ್ರ ಮತ್ತು ಮಾದಾವರ ನಡುವೆ ಮೆಟ್ರೋ ಲೇನ್ ಸಿಗ್ನಲ್ ಪರೀಕ್ಷೆ ನಡೆಯಲಿರುವ ಕಾರಣ ಪೀಣ್ಯ ಇಂಡ್ರಸ್ಟಿ ಮತ್ತು ನಾಗಸಂದ್ರ ನಡುವೆ ಆಗಸ್ಟ್ 20, 23 ಮತ್ತು 30 ರಂದು ಮೆಟ್ರೋ ಸಂಚಾರ ಸ್ಥಗಿತವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಇಂದಿನಿಂದ ಕೆಲವೆಡೆ ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆ ಸಿಗೋದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.
Post a comment
Log in to write reviews