ಟೈಗರ್ ಶ್ರಾಫ್ ಅಭಿನಯದ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿವೆ, ಅದರಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗ ಅವರ ಕೈಯಲ್ಲಿ ಯಾವುದೇ ಸಿನಿಮಾಗಳು ಇಲ್ಲ! ಅವಕಾಶಗಳು ಇಲ್ಲದ ಕಾರಣ ಹೆಚ್ಚಿನ ಸಂಭಾವನೆಯನ್ನೂ ಅವರು ನಿರೀಕ್ಷಿಸುವಂತಿಲ್ಲ. ಪ್ರೇಕ್ಷಕರಿಗೆ ಮತ್ತು ನಿರ್ಮಾಪಕರಿಗೆ ಟೈಗರ್ ಶ್ರಾಫ್ ಮೇಲೆ ಭರವಸೆ ಇಲ್ಲದಂತಾಗಿದೆ.
ನಟ ಟೈಗರ್ ಶ್ರಾಫ್ ಅವರ ಮೇಲೆ ಬಾಲಿವುಡ್ ಮಂದಿ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಕಟ್ಟುಮಸ್ತಾದ ದೇಹ ಹೊಂದಿರುವ ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದರು. ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಟೈಗರ್ ಶ್ರಾಫ್ ಪಾಲಿಗೆ ಈಗ ಕಷ್ಟದ ಕಾಲ ಬಂದಿದೆ. ಅವರ ಸಿನಿಮಾಗಳು ಸತತ ಸೋಲು ಕಂಡಿವೆ. ಅದರ ಪರಿಣಾಮವಾಗಿ ಅವರಿಗೆ ಯಾವುದೇ ಆಫರ್ ಸಿಗುತ್ತಿಲ್ಲ. ಅಲ್ಲದೇ,ಸಂಭಾವಣೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಕೊಡಲು ಯಾವ ನಿರ್ಮಾಪಕರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಈ ವರ್ಷ ತೆರೆಕಂಡಿತು. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಲು ಈ ಸಿನಿಮಾಗೆ ಸಾಧ್ಯವಾಗಲ್ಲಿಲ್ಲ.
ಇಷ್ಟು ದಿನಗಳ ಕಾಲ ಟೈಗರ್ ಶ್ರಾಫ್ ಅವರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಕೇವಲ 9 ಕೋಟಿ ಪಡೆಯುವಂತೆ ನಿರ್ಮಾಪಕರು ಅವರಿಗೆ ಸಲಹೆ ನೀಡಿದ್ದಾರಂತೆ. ನಿರ್ಮಾಪಕರಿಂದ ಈ ಮಾತು ಕೇಳಿಸಿಕೊಂಡು ಟೈಗರ್ ಶ್ರಾಫ್ ಖಂಡಿತಾ ಬೇಸರ ಆಗಿದೆ. ಹಾಗಾಗಿ ಅವರು ತಮ್ಮ ವೃತ್ತಿಜೀವನದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಬಿ-ಟೌನ್ನಲ್ಲಿ ಮಾತು ಕೇಳಿಬರುತ್ತಿದೆ.
Post a comment
Log in to write reviews