ಉತ್ತರಕನ್ನಡ: ಪಡಿತರ ಕಾರ್ಡ್ ತಿದ್ದುಪಡಿಗೆ ಇಂದು (ಆಗಸ್ಟ್ 10) ಕೊನೆಯ ದಿನವೆಂದು ಆಹಾರ ಮತ್ತು ನಾಗರಿಕ (FOOD AND CIVIL SUPPLY DEPARTMENT) ತಿಳಿಸಿದೆ.
ಕಳೆದ ಜುಲೈ 1ರಿಂದ ಪಡಿತರ ಚೀಟಿಯ ತಿದ್ದುಪಡಿಗಾಗಿ ಆಹಾರ ಇಲಾಖೆ ಅವಕಾಶ ನೀಡಿತ್ತು. ಹಾಗೆ ತಿದ್ದುಪಡಿಗೆ ಆಗಸ್ಟ್ 10 ಕೊನೆಯ ದಿನವಾಗಿದ್ದು, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಿದ್ದುಪಡಿಗೆ ಅವಕಾಶವಿದೆ ಎಂದು ತಿಳಿಸಲಾಗಿದೆ. ಈಗಾಗಲೇ 40 ದಿನ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಮತ್ತೆ ದಿನಾಂಕವನ್ನ ವಿಸ್ತರಣೆ ಮಾಡುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ. ಮತ್ತೆ ತಿದ್ದುಪಡಿ ಮಾಡುವುದಾದರೆ ಕನಿಷ್ಠ ಮೂರರಿಂದ ರಿಂದ ಆರು ತಿಂಗಳು ಕಾಯಬೇಕಾಗುತ್ತದೆ ಎಂದು ಹೇಳಿದೆ.
ಕಾರ್ಡುದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ಕೊಡಲಾಗಿದೆ. ತಿದ್ದುಪಡಿ ಸಂದರ್ಭದಲ್ಲಿ ಅರ್ಜಿದಾರರು ಆಧಾರ್ ಕಾರ್ಡ್ ಪ್ರತಿ, ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ ಹಾಲಿ ಪಡಿತರ ಚೀಟಿ ದಾಖಲೆ ಇಟ್ಟುಕೊಂಡಿರಬೇಕು.
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಗಳಿಗಿಂತಲೂ ಹೆಚ್ಚಿರುವುದು, ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನವುಳ್ಳವರು, ಐ.ಟಿ. ರಿಟನ್ಸ್ (ಆದಾಯ ತೆರಿಗೆ ಪಾವತಿಸುವವರು ಬಿಪಿಎಲ್ ಕಾರ್ಡ್ ಹಿಂದಿರುಗಿಸುವಂತೆ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನರ್ಹರು ಚೀಟಿ ಹೊಂದಿದ್ದಲ್ಲಿ ಆ. 31 ರೊಳಗಾಗಿ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆಗೆ, ಆಹಾರ, ನಾಗರಿಕ ಮತ್ತು ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ನೀಡಬೇಕು. ತಪ್ಪಿದಲ್ಲಿ ಅನರ್ಹ ಪಡಿತರ ಚೀಟಿದಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣ ಸ್ವಂತ ಮನೆ ಹೊಂದಿರುವವರು, ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿರುವವರು ಬಿಪಿಎಲ್ (BPL) ಪಡಿತರ ಚೀಟಿ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Post a comment
Log in to write reviews