ಯಾವುದೇ ಒಂದು ಸಿನಿಮಾ ಅದ್ದೂರಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳ ಬೇಕೆಂದರೆ ಅದಕ್ಕೆ ಬಜೆಟ್ ತುಂಬಾ ಮುಖ್ಯವಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಒಂದು ಸಿನಿಮಾಗೆ ನಿರ್ಮಾಪಕ ತನ್ನೆಲ್ಲ ಹಣವನ್ನು ಹಾಕಿ ಸಾಲಾ ಸೂಲಾ ಮಾಡಿ ಸಿನಿಮಾ ಮಾಡಿ ಪ್ರೇಕ್ಷಕರ ಮುಂದಿಡುತ್ತಾನೆ. ಅದನ್ನು ಪ್ರೇಕ್ಷಕ ಒಪ್ಪಿದಾಗ ಹಾಕಿದ ಹಣ ವಾಪಾಸ್ ಬರುತ್ತದೆ. ಇಲ್ಲದಿದ್ದರೆ ಹಾಕಿದ ಹಣ ಪೂರ ಲಾಸ್ ಆಗುತ್ತದೆ. ಇದುವರೆಗೆ ಕನ್ನಡ ದ ಟಾಪ್ 5 ಬಿಜೆಟ್ ಸಿನಿಮಾಗಳು ಯಾವುವು ಅವುಗಳ ಬಜೆಟ್ ಎಷ್ಟು ಎಂದು ನೋಡೋಣ ಬನ್ನಿ
1) ಕಬ್ಜಾ
ಮೊದಲನೇ ಸ್ಥಾನದಲ್ಲಿ ಮಲ್ಟಿ ಸ್ಟಾರರ್ ಮೂವೀ ಕಬ್ಜ ನಿಲ್ಲುತ್ತದೆ. ಉಪೇಂದ್ರ ಪ್ರಮುಖ ರೋಲ್ ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸುದೀಪ್ ಹಾಗೂ ಶಿವಣ್ಣ ಸಹ ಈ ಚಿತ್ರದಲ್ಲಿ ನಟಿಸಿದ್ದರು. ಇದರಿಂದಾಗಿ ಈ ಸಿನಿಮಾ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿತ್ತು. ಈ ಸಿನಿಮಾವನ್ನೂ ನಿರ್ದೇಶಿಸಿದ ಆರ್ ಚಂದ್ರು ಅವರೇ ನಿರ್ಮಾಣವನ್ನು ಸಹ ಮಾಡಿದ್ದು. ಈ ಸಿನಿಮಾಗೆ ಸರಿಸುಮಾರು 120 ಕೋಟಿ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಬಹಳ ನಿರೀಕ್ಷೆಯನ್ನು ಹುಟ್ಟಿಸಿದ್ದರೂ ಬಾಕ್ಸ್ ಆಫಿಸ್ ಕಲೆಕ್ಷನ್ ಅಲ್ಲಿ ಮುಗ್ಗರಿಸಿತು
2)ಕೆಜಿಎಫ್ ಚಾಪ್ಟರ್ 2
ಯಶ್ ಅಭಿನಯದ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಬಜೆಟ್ ಲೆಕ್ಕಾಚಾರದಲ್ಲಿಎರಡನೇ ಸಾಲಿನಲ್ಲಿ ನಿಲ್ಲುತ್ತದೆ. ಈ ಸಿನಿಮಾ 2022 ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಇದಕ್ಕೆ ಕನ್ನಡ ಪ್ರಸಿದ್ಧ ನಿರ್ಮಾಣ ಸಂಸ್ಥೆಯಲ್ಲೊಂದಾದ ಹೊಂಬಾಳೆ ಸಂಸ್ಥೆ ಸರಿ ಸುಮಾರು 100 ಕೋಟಿ ರೂಪಾಯಿ ಗಳವರೆಗೆ ಬಂಡವಾಳ ಹೂಡಿದೆ. ಈ ಸಿನಿಮಾ ವಿಶ್ವದಾದ್ಯಂತ 1250 ಕೋಟಿ ಹಣ ಗಳಿಸಿದೆ ಎನ್ನಲಾಗಿದೆ.
3) ವಿಕ್ರಾಂತ್ ರೋಣ
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಒಟ್ಟು ಬಜೆಟ್ 95 ಕೋಟಿ. ಈ ಸಿನಿಮಾ ಜುಲೈ 28, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನವಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದರು. ಮಾಹಿತಿ ಪ್ರಕಾರ ಈ ಸಿನಿಮಾ ಸರಿಸುಮಾರು 210 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
4) ಕೆಜಿಎಫ್ ಚಾಪ್ಟರ್ 1
ಯಶ್ ಅಭಿನಯದ ಕೆಜಿಎಫ್ ಸಿನಿಮಾ 4 ಸ್ಥಾನದಲ್ಲಿ ನಿಲ್ಲುತ್ತದೆ. 2018 ರಲ್ಲಿ ತೆರೆಕಂಡ ಈ ಸಿನಿಮಾ ಆ ಕಾಲಕ್ಕೆ ಅತಿ ಹೆಚ್ಚು ಬಂಡವಾಳ ಹೂಡಿರುವ ಕನ್ನಡ ಸಿನಿಮಾವಾಗಿತ್ತು. ಈ ಸಿನಿಮಾದ ಬಜೆಟ್ 80 ಕೋಟಿ ರೂಪಾಯಿ. ಈ ಸಿನಿಮಾಗೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿತ್ತು, ಈ ಸಿನಿಮಾ ಸರಿಸುಮಾರು ವಿಶ್ವದಾದ್ಯಂತ 250 ಕೋಟಿ ರೂ ಗಳಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
5) ಕುರುಕ್ಷೇತ್ರ
2019 ರಲ್ಲಿ ರಿಲೀಸ್ ಆದ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾವು 5 ನೇ ಸ್ಥಾನದಲ್ಲಿ ನಿಲ್ಲುತ್ತದೆ. ಈ ಸಿನಿಮಾವನ್ನು ನಾಗಣ್ಣ ನಿರ್ದೇಶನದ ಮಾಡಿದ್ದು, ಮುನಿರತ್ನ ಈ ಸಿನಿಮಾಗೆ ಬಂಡವಾಳ ಹೂಡಿದ್ದರು, ಈ ಸಿನಿಮಾ ಸರಿಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 90 ಕೋಟಿ ವರೆಗೆ ಬಾಕ್ಸ್ ಆಫಿಸ್ ನಲ್ಲಿ ಹಣ ಗಳಿಸಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಜಾಸ್ತಿ ಹಣ ಹಾಕಿದರೆ ಮಾತ್ರ ಜಾಸ್ತಿ ಹಣ ತೆಗೆಯಲು ಸಾಧ್ಯ ಎಂಬುವುದು ನಿರ್ಮಾಪಕರ ಅಭಿಪ್ರಾಯ. ಆದರೆ ಇತ್ತೀಚೆಗೆ ಬಂದ ಕಾಂತಾರ ಹಾಗೂ 777 ಚಾರ್ಲಿ ಅತಿ ಕಡಿಮೆ ಹಣದಲ್ಲಿ ನೂರಾರು ಕೋಟಿ ಗಳಿಸಿದ್ದನ್ನು ನಾವು ನೋಡಬಹುದು. ಇದರಿಂದ ನಮಗೆ ತಿಳಿಯುವುದು ಸಿನಿಮಾ ಗೆಲ್ಲಲು ಹಣ ಮುಖ್ಯವಲ್ಲ ಕಾಂಟೆಂಟ್ ಮುಖ್ಯ ಎಂಬುದು.
Tags:
- big budget movie in sandalwood
- top 10 big budget south indian movies
- big budget kannada movies
- big budget movie in kannada
- big budget movies
- kannada big budget movie
- high budget kannada movies
- kannada high budget movies
- kannada movies budget
- kannada highest budget movie
- SANDALWOOD
- FILMYNEWS
- SAMAYANEWS
- SAMAYADIGITEL
Post a comment
Log in to write reviews