Samayanews.

Samayanews.

2024-12-24 01:04:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾಲೇಜು ಕಟ್ಟಡದಿಂದ ಜಿಗಿದು ಟ್ರೈನಿ ವೈದ್ಯೆ ಆತ್ಮಹತ್ಯೆ

ತಮಿಳುನಾಡು : ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಟ್ರೈನಿ ವೈದ್ಯೆಯೊಬ್ಬರು ಕ್ಯಾಂಪಸ್‌ನಲ್ಲಿರುವ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಮೃತ ಪಟ್ಟಿರುವ ಘಟನೆ ಕಾಂಚಿಪುರಂ ಜಿಲ್ಲೆಯ ಖಾಸಗಿ ಆಸ್ಪತ್ರೆ ಮೀನಾಕ್ಷಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಶೆರ್ಲಿನ್, ( 23) ತಿರುನಲ್ವೇಲಿ ಮೂಲದವರಾಗಿದ್ದು, ಸಂಸ್ಥೆಯಲ್ಲಿ ಐದನೇ ವರ್ಷದ ತರಬೇತಿ ವೈದ್ಯರಾಗಿದ್ದರು. ಭಾನುವಾರ ರಾತ್ರಿ, ಐದನೇ ಮಹಡಿಯ ಕಿಟಕಿಯ ಹಲಗೆಯ ಹೊರಗೆ ಬಹಳ ಹೊತ್ತು ಕುಳಿತಿದ್ದಿರುವ ವೀಡಿಯೋ ಇತರ ವಿದ್ಯಾರ್ಥಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

 ಈ ದೃಶ್ಯವನ್ನುನೋಡಿದ ಇತರೆ ವಿದ್ಯಾರ್ಥಿಗಳು ಅವಳನ್ನು ಸಂಪರ್ಕಿಸುವ ಅಥವಾ ಮಾತನಾಡುವ ಮೊದಲು, ಶೆರ್ಲಿನ್ ಹಾರಿದ್ದಾರೆ ಎಂದು ವರದಿಯಾಗಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ, ವೈಯಕ್ತಿಕ ಕಾರಣಗಳಿಂದಾಗಿ ಶೆರ್ಲಿನ್ ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಾಥಮಿಕ ಮಾಹಿತಿಗಳು ಸೂಚಿಸಿವೆ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು,  ಇನ್ನು ಘಟನೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

img
Author

Post a comment

No Reviews