ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದೆ.ಇದಾದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ತೀವ್ರತೆ ಪ್ರಾಥಮಿಕವಾಗಿ 6.9ಯಷ್ಟಿತ್ತು ಎನ್ನಲಾಗಿದೆ. ಭೂಕಂಪದ ಕೇಂದ್ರಬಿಂದುವು ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶು ಪೂರ್ವ ಕರಾವಳಿಯಿಂದ ಸುಮಾರು 30 ಕಿಲೋಮೀಟರ್ (18.6 ಮೈಲುಗಳು) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ ಎನ್ನಲಾಗಿದೆ.
ಭೂಕಂಪದ ನಂತರ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಕ್ಯುಶುವಿನ ದಕ್ಷಿಣ ಕರಾವಳಿ ಮತ್ತು ಶಿಕೋಕು ಹತ್ತಿರದ ದ್ವೀಪದ ಉದ್ದಕ್ಕೂ 1 ಮೀಟರ್ (3.3 ಅಡಿ) ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಇನ್ನು ಭೂಕಂಪದಿಂದ ಯಾವುದಾದರೂ ಹಾನಿ ಸಂಭವಿಸಿದೆಯೇ ಎನ್ನುವುದನ್ನು ಕ್ಯುಶು ಮತ್ತು ಶಿಕೋಕುದಲ್ಲಿನ ಪರಮಾಣು ಸ್ಥಾವರಗಳ ನಿರ್ವಾಹಕರು ತನಿಖೆ ನಡೆಸುತ್ತಿದ್ದಾರೆ. ಜಪಾನ್‌ನ NHK ಸ್ಟೇಟ್ ಟೆಲಿವಿಷನ್, ಭೂಕಂಪದ ಕೇಂದ್ರದ ಸಮೀಪವಿರುವ ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಕಿಟಕಿಗಳು ಮುರಿದಿರುವ ಬಗ್ಗೆ ವರದಿ ಮಾಡಿದೆ.
ಜಪಾನ್ ಪೆಸಿಫಿಕ್ 'ರಿಂಗ್ ಆಫ್ ಫೈರ್'ನಲ್ಲಿದೆ. ಇದು ವಿಶ್ವದ ಅತ್ಯಂತ ಭೂಕಂಪನ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಜನವರಿ 1 ರಂದು ಜಪಾನ್‌ನ ಉತ್ತರ-ಮಧ್ಯ ಪ್ರದೇಶದಲ್ಲಿ ನೊಟೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 240 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
Post a comment
Log in to write reviews