ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ (ಆಗಸ್ಟ್ 7) ಭಾರೀ ಮಳೆಯಾಗಿದ್ದು, (ಕಾರವಾರ, ಗೋಕರ್ಣ, ಕೋಲಾರ, ಬೆಂಗಳೂರು ಸೇರಿ ರಾಜ್ಯದ ಕೆಲವು ಕಡೆ ಮಂಗಳವಾರವೂ ಭಾರೀ ಮಳೆಯಾಗಿದೆ.
ಅತಿಯಾದ ಮಳೆಯಿಂದ ಗೋಕರ್ಣದಲ್ಲಿ ರಥಬೀದಿ ಸೇರಿ ಹಲವು ರಸ್ತೆಗಳು ಜಲಾವೃತಗೊಂಡಿವೆ. ಅಂಕೋಲಾದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಯಾದಗಿರಿ ಸಮೀಪದ ಭೀಮಾ ನದಿಪಾತ್ರದ ವೀರಾಂಜನೇಯ, ಕಂಗಳೇಶ್ವರ ದೇವಸ್ಥಾನಗಳು ಜಲಾವೃತಗೊಂಡಿವೆ. ಕೋಲಾರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತ ಸ್ಥಿತಿ ತಲುಪಿದ್ದಾರೆ. ಉಜನಿ ಜಲಾಶಯದಿಂದ ಭೀಮಾ ನದಿಗೆ 1.60 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಕಲಬುರಗಿ ಜಿಲ್ಲೆಯ ಮಣ್ಣೂರಿನ ವೇದೇಶತೀರ್ಥ ಸಂಸ್ಕೃತ ಪಾಠಶಾಲೆಗೆ ನೀರು ನುಗ್ಗಿದ್ದು, 25ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಪ್ರವಾಹ ಬಂದಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಏಳು ನಾಯಿಗಳನ್ನು ರಕ್ಷಿಸಲಾಗಿದೆ.
Post a comment
Log in to write reviews