ಕೇಂದ್ರ ಸರಕಾರ ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆ ಘಾಟಿ ಕೊರೆದು ಸುರಂಗ ಮಾರ್ಗ ನಿರ್ಮಿಸುವ ಲೆಕ್ಕಾಚಾರದಲ್ಲಿದೆ. ಆದರೆ, ಇದು ‘ಗುಡ್ಡ ಅಗೆದು ಇಲಿ ಹಿಡಿಯುವ ಸಾಹಸವೇ’ ವಿನಾ ಮತ್ತೇನಲ್ಲ.
ಈಗಾಗಲೇ ಪಶ್ಚಿಮಘಟ್ಟದ ಮೇಲೆ ವಿವಿಧ ಯೋಜನೆಗಳ ಹೆಸರಿನಲ್ಲಿ ಸಾಕಷ್ಟು ದೌರ್ಜನ್ಯ ಎಸಗಲಾಗಿದೆ. ಅದರ ಪರಿಣಾಮವನ್ನೂ ಮಲೆನಾಡು ಎದುರಿಸುತ್ತಿದೆ. ಹೀಗಿರುವಾಗ, ಮಾನ್ಸೂನ್ ತಡೆಯುವ ಪರ್ವತ ಶ್ರೇಣಿಯಂತಿರುವ ಆಗುಂಬೆ ವಿನಾಶಕ್ಕೆ ಕೈಹಾಕಿರುವುದು ಕರುನಾಡಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಮಳೆ ಸುರಿಯಬೇಕಾದರೆ ಆಗುಂಬೆಯ ಪಾತ್ರ ಹಿರಿದು. ಪರಿಸರ ನಿರ್ಮಿತ ಈ ಮಳೆಕಾಡು ಕೋಟ್ಯಂತರ ಜೀವವೈವಿಧ್ಯಗಳ ಆವಾಸತಾಣವಾಗಿದೆ. ಒಂದು ವೇಳೆ, ಈ ಯೋಜನೆಗೆ ಸರಕಾರ ಮುಂದಾದರೆ, ತುಂಬಲಾರದಷ್ಟು ಪರಿಸರ ನಾಶವಾಗಲಿದೆ.
Post a comment
Log in to write reviews