ಕಿರುತೆರೆ ನಟಿ ಪವಿತ್ರಾ ಜಯರಾಂ ಅವರಿಗೆ ಕಾರು ಅಪಘಾತದಲ್ಲಿ ಏನೂ ಅಗಿರಲಿಲ್ಲ. ನಿಜ ಹೇಳಬೇಕು ಅಂದ್ರೆ ಘಟನೆ ನಡೆದ ಸ್ಥಳಕ್ಕೆ ಆಯಂಬುಲೆನ್ಸ್ ತಡವಾಗಿ ಬಂತು. ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ ಸತ್ತಿದ್ದಾಳೆ ಇಲ್ಲ ಅಂದ್ರೆ ಪವಿತ್ರಾ ಬದುಕುತ್ತಿದ್ದಳು. ಪವಿತ್ರಾ ಸಾವಿಗೆ ಅಂಬುಲೆನ್ಸ್ ಕಾರಣ ಎಂದು ಪವಿತ್ರಾ ಜಯರಾಂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸ್ನೇಹಿತ ಚಂದ್ರಕಾಂತ್ ಸಾವಿನ ಸತ್ಯ ಬಹಿರಂಗ ಪಡಿಸಿದ್ದಾರೆ.
ಕಾರಿನಲ್ಲಿ ನಾವು ಬೆಂಗಳೂರಿನಿಂದ ಹೈದರಾಬಾದ್ ಕಡೆ ಪ್ರಯಾಣ ಮಾಡುತ್ತಿದ್ದೆವು. ಸುಮಾರು 2.30 ಮಧ್ಯಾಹ್ನ ನಮ್ಮ ಪ್ರಯಾಣ ಶುರು ಮಾಡಿಲಾಗಿತ್ತು. ತುಂಬಾ ಮಳೆ ಬರುತ್ತಿದ್ದ ಕಾರಣ ಸುಮಾರು 3 ಗಂಟೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತುಂಬಾ ಸುಸ್ತಾಗಿದ್ದ ಕಾರಣ ರೆಸ್ಟ್ ಬೇಕು ಎಂದು ನಿದ್ರೆ ಮಾಡಿದೆವು. ಕಾರಿನಲ್ಲಿ ಒಟ್ಟು ನಾಲ್ಕು ಜನ ಇದ್ವಿ. ಕಾರನ್ನು ಚಾಲಕ ಓಡಿಸುತ್ತದ್ದ ಆತನ ಪಕ್ಕ ಪವಿತ್ರಾ ಅಕ್ಕನ ಮಗಳು ಇದ್ದಳು..ಹಿಂದೆ ನಾನು ಮತ್ತು ಪವಿತ್ರಾ ಇದ್ವಿ' ಎಂದು ಚಂದ್ರಕಾಂತ್ ಮಾತನಾಡಿದ್ದಾರೆ.
'ಡ್ರೈವರ್ ಹೇಳಿದ ಪ್ರಕಾರ ಆತ 60 ಅಡಿ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ಆಗ ಇದ್ದಕ್ಕಿದ್ದಂತೆ ವೇಗವಾಗಿ ಬಸ್ ಬಂತು. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋ ಕಾರಿಗೆ ನಮ್ಮ ಕಾರು ಡಿಕ್ಕಿ ಹೊಡೆದಿದೆ ರಭಸದಲ್ಲಿ ಬ್ರೇಕ್ ಹಾಕಿದ್ದಕ್ಕೆ ಕಾರು ಬಲಗಡೆಗೆ ವಾಲಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಯಾರಿಗೂ ಏನೂ ಆಗಿಲ್ಲ. ನನಗೆ ಮಾತ್ರ ಕೈ ಪೆಟ್ಟು ಬಿದ್ದು ಕೈ ಫ್ರಾಕ್ಚರ್ ಆಗಿದೆ. ಅಪಘಾತವಾದಾಗ ಪವಿತ್ರಾ ನನ್ನನ್ನು ನೋಡಿ ಏನಾಯ್ತು ಏನಾಯ್ತು ಎಂದು ಜೋರಾಗಿ ಉಸಿರು ಎಳೆದುಕೊಂಡಳು ಅಷ್ಟೆ. ಘಟನೆ ನಡೆದಿರುವುದು ರಾತ್ರಿ 12.40 ಸಮಯದಲ್ಲಿ ಎಂದು ಅಲ್ಲಿದ್ದ ಜನರು ಹೇಳಿದ್ದಾರೆ ಆದರೆ ನನಗೆ ಪ್ರಜ್ಞೆ ಇರಲಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ನನಗೆ ಎಚ್ಚರವಾಗಿತ್ತು ಆಗ ಪವಿತ್ರಾ ಇಲ್ಲ ಅನ್ನೋ ವಿಚಾರ ತಿಳಿಯಿತು. ನಾನು ಹುಚ್ಚನಂತೆ ವರ್ತಿಸುತ್ತಿದ್ದೆ ಎಂದು ಡಾಕ್ಟರ್ ಹೇಳುತ್ತಿದ್ದರು ಎಂದು ಚಂದ್ರಕಾಂತ್ ಹೇಳಿದ್ದಾರೆ.
ಪವಿತ್ರಾ ಜಯರಾಂ ಅಂತಕ್ರಿಯೆ ಮಂಡ್ಯದ ಉಮ್ಮಡಹಳ್ಳಿ ಗ್ರಾಮದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ನೆರವೇರಿಸಲಾಗಿದೆ. ಪುತ್ರ ಪ್ರಜ್ವಲ್ ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತಿಮ ವಿದಿವಿಧಾನ ನೆರವೆರಿಸಿದ್ದಾರೆ.
Post a comment
Log in to write reviews