ಬೆಂಗಳೂರು: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶದ ಟಾಪ್ 20 ರಲ್ಲಿ ಬೆಂಗಳೂರು ಮೂಲದ ಇಬ್ಬರು ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶದ ಪ್ರಕಟವಾಗಿದ್ದುಬೆಂಗಳೂರಿನ ಶಾನ್ ಥಾಮಸ್ ಕೋಶಿ 360ಕ್ಕೆ 325 ಅಂಕ ಹಾಗೂ ಅಮೋಘ್ ಅಗತವಾಲ್ 322 ಅಂಕ ಮೂಲಕ ಭಾರತದ ಟಾಪ್ 20ರ ರ‍್ಯಾಂಕ್ ಪಟ್ಟಿಯಲ್ಲಿದ್ದಾರೆ.
ಫಲಿತಾಂಶ ಪ್ರಕಟದ ನಂತರ ಶಾನ್ ಅವರ ತಾಯಿ ರೋಸ್ ಮೇರಿ ಜಾನ್ ಈ ಬಗ್ಗೆ ಮಾತನಾಡಿ, ಮಗ ಶಾನ್ ಪ್ರೋಗ್ರಾಮಿಂಗ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಈಗಾಗಳೇ ಹತ್ತಾರು ಅಪ್ಲಿಕೇಶನ್ ಅನ್ನು ಸಿದ್ದಪಡಿಸಿದ್ದಾನೆ. ಇದಲ್ಲದೆ ತನ್ನ ವಿದ್ಯಾಭ್ಯಾಸದ ಖರ್ಚನ್ನು ತಾನೇ ನೋಡಿಕೊಂಡು ಓದಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ ಎಂದರು.
ಅಮೋಘ್ ಅಗರ್ವಾಲ್ ಮಾತನಾಡಿ, ಎರಡು ವರ್ಷಗಳ ನನ್ನ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ನಾನು ಅತ್ಯುತ್ತಮ ಐಐಟಿಗಳಲ್ಲಿ ಒಂದಕ್ಕೆ ಅರ್ಜಿ ಸಲ್ಲಿಸುತ್ತೇನೆ. ಕಾವೇರಿ ಭವನದ ನಾರಾಯಣ ಸಿಒ ಶಾಲೆಯ ವಿದ್ಯಾರ್ಥಿಯಾಗಿದ್ದು, ನಾನ್ನು ಹಾಕಿಕೊಂಡ ವೇಳಾಪಟ್ಟಿ ಸರಿಯಾಗಿ ಪಾಲಿಸಿದ್ದಕ್ಕೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
Post a comment
Log in to write reviews