ಶಿವಮೊಗ್ಗ: ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಕಾಲೇಜುಗಳು ನಗರದಲ್ಲಿ ತಲೆ ಎತ್ತುತಿವೆ. ಅನುಮತಿ ಇಲ್ಲದಿದ್ದರು ಸಹ ಕಾಲೇಜು ಹೆಸರಿನಲ್ಲಿ ಬೋರ್ಡ್‌ಗಳನ್ನು ಹಾಕಿಕೊಂಡು ಕಾಲೇಜಿಗೆ ಅಡ್ಮಿಷನ್ ಪ್ರಾರಂಭ ಮಾಡಿದ್ದಾರೆ. ಅಷ್ಡೇ ಅಲ್ಲದೆ ಕಾಲೇಜಿನ ಹೆಸರಿನಲ್ಲಿ ಜಾಹೀರಾತುಗಳನ್ನು ನೀಡಲಾಗುತ್ತಿದೆ.
ನಗರದ ಹೊರವಲಯದ ಶರಾವತಿ ಡೆಂಟಲ್ ಕಾಲೇಜ್ ಪಕ್ಕ ಮಲೆನಾಡು ಕಾಲೇಜ್ ಎನ್ನುವ ಹೆಸರಿನ ಕಾಲೇಜ್ ನೋಂದಾವಣೆಯಾಗಿದ್ದು ಆದರೆ ಅದನ್ನು ದಾವಣಗೆರೆ ಮೂಲದ ಸರ್ ಎಂವಿ ಸಂಸ್ಥೆ ಖರೀದಿಗೆ ತೆಗೆದುಕೊಂಡಿದ್ದು ಅದನ್ನು ಸರ್ ಎಂವಿ ಸಂಸ್ಥೆಯ ಹೆಸರಿನಲ್ಲಿ ನಡೆಸಲು ಶಿಕ್ಷಣ ಇಲಾಖೆಗೆ ಅನುಮತಿಗಾಗಿ ಕೋರಿತ್ತು. ಆದರೆ ಆನುಮತಿ ಮಾತ್ರ ದೊರತಿರಲಿಲ್ಲ ಎನ್ನಾಲಾಗಿದೆ.
ಈ ಕುರಿತು ಮಾದ್ಯಮದೊಂದಿಗೆ ಡಿಡಿಪಿಯು ಕೃಷ್ಣಪ್ಪ ಇದರ ಬಗ್ಗೆ ದಿನಾಂಕ 14/6 /24ರಂದು ನೋಟಿಸ್ ನೀಡಿದ್ದೇವೆ ಆ ನೋಟಿಸ್ ಗೆ ಉತ್ತರ ನೀಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು ಆದರೆ ಇಲ್ಲಿಯವರೆಗೂ ಆ ನೋಟಿಸ್ ಗೆ ಯಾವುದೇ ಉತ್ತರವನ್ನು ಸಂಸ್ಥೆ ನೀಡಿಲ್ಲ ಇದನ್ನು ಮತ್ತೆ ಪರಿಶೀಲಿಸಿ ಮತ್ತೆ ನೋಟಿಸ್ ನೀಡಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗೆ ಮುಂದುವರಿದು ಇನ್ನೂ ಪರ್ಮಿಷನ್ ಸಿಗದೇ ಕಾಲೇಜ್ ಅಡ್ಮಿಷನ್ ಪ್ರಾರಂಭ ಮಾಡಿರುವುದು ಹಾಗೂ ಬೋರ್ಡ್‌ಗಳನ್ನು ಹಾಕಿಕೊಂಡಿರುವುದರ ಬಗ್ಗೆ ಕೇಳಿದಾಗ ಅದರ ವಿರುದ್ಧವೂ ಕೂಡ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Post a comment
Log in to write reviews