ಹಾವೇರಿ: ಚಾರ್ಧಾಮ್ ಯಾತ್ರೆಗಾಗಿ ಉತ್ತರಾಖಂಡ್ಗೆ ತೆರಳಿದ್ದ ಹಾವೇರಿ ಜಿಲ್ಲೆಯ ಏಳು ಮಂದಿ ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬದರಿನಾಥ್ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದಾಗ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಎಂಬ ಗ್ರಾಮದ ಬಳಿ ಭೂಕುಸಿತ ಸಂಭವಿಸಿದ್ದು ಯಾತ್ರಾರ್ಥಿಗಳು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳಾದ ಶ್ರೀಧರ್ ಎಂ. ಹೊಳಲ್ಕೇರಿ (62), ಶಾಂತಾ ಎಸ್.ಹೊಳಲ್ಕೇರಿ (57), ಅಶೋಕ್ ಎಸ್.ವಿ.(61), ಭಾರತಿ ಎ.ಎಸ್.(55), ವೆಂಕಟೇಶ್ ಪಂಪನ್ (62), ರಾಜೇಶ್ವರಿ ಪಂಪನ್ (60), ರಾಹುಲ್ ಪಂಪನ್ (35) ಜೂನ್ 29ರಂದು ಯಾತ್ರೆಗೆ ತೆರಳಿದ್ದರು. ವಿಮಾನ ಟಿಕೆಟ್ ಬುಕ್ ಮಾಡಿದ್ದು, ವಾಪಸ್ ಬರಬೇಕಿತ್ತು. ಆದರೆ, ಅಷ್ಟರಲ್ಲಿ ಸಂಭವಿಸಿದ ಭೂಕುಸಿತದಿಂದ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ತಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆದೊಯ್ಯುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Post a comment
Log in to write reviews