ಬಾಗಲಕೋಟೆ: ಜಿಲ್ಲೆಯ ಹುನುಗುಂದ ನಗರದಲ್ಲಿ ತರಕಾರಿ ಮಾರುಕಟ್ಟೆ ಕೊಳಚೆ ಗುಂಡಿ ರೀತಿ ನಿರ್ಮಾಣವಾಗಿದೆ.
ನಗರದ ತರಕಾರಿ ಮಾರುಕಟ್ಟೆ ಗುಂಡಿ ತರ ನಿರ್ಮಾಣವಾದ ಕಾರಣ ಬಡ ವ್ಯಾಪಾರಿಗಳ ಬವಣೆಯಂತೂ ಹೇಳತೀರದು. ಇನ್ನೊಂದೆಡೆ ಗ್ರಾಹಕರು ಸಹ ಪರದಾಡುವ ಸ್ಥಿತಿ ಉಂಟಾಗಿದೆ. ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸ್ಥಳವಿಲ್ಲದೆ ಕಂಗಾಲಾಗಿದ್ದಾರೆ. ವೃದ್ಧರು ಮತ್ತು ಮಕ್ಕಳು ನಡೆದಾಡಲು ಸಹ ಕಷ್ಟ ಪಡುತ್ತಿದ್ದಾರೆ. ಈ ಎಲ್ಲಾ ಅವಾಂತರಕ್ಕೆ ಪುರಸಭೆಯೇ ಕಾರಣವೆಂದು ನೆಟ್ಟಿಗರು ದೂರಿದ್ದಾರೆ.
2008ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯವರು ರೈತರಿಗೆ ಒಂದು ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿ ಅದನ್ನು ಪುರಸಭೆಗೆ ಹಸ್ತಾಂತರಿಸಿದರು. ಕಟ್ಟಡವನ್ನು ಕೆಲ ದೊಡ್ಡ ವ್ಯಾಪಾರಿಗಳು ಅವುಗಳನ್ನು ಸಂಗ್ರಹ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಹುನಗುಂದ ಪುರ ಸಭೆಯು ಯಾವುದೇ ರೀತಿಯ ಸೌಲಭ್ಯ ಒಗಿದಸದೆ ಇರುವುದು ವಿವಾದಕ್ಕೆ ಕಾರಣವಾಗಿದೆ. ಈಗಲಾದರೂ ಸ್ಥಳೀಯ ಶಾಸಕರು ಮತ್ತು ಪುರಸಭೆಯ ಆಡಳಿತ ಮಂಡಳಿಯವರು ಹುನಗುಂದ ನಗರಕ್ಕೆ ಒಂದು ತರಕಾರಿ ಮಾರುಕಟ್ಟೆ ನಿರ್ಮಿಸಬೇಕೆಂದು ರೈತ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
Post a comment
Log in to write reviews