ಬೆಂಗಳೂರು: ಲೈಕಾ ಪ್ರೊಡಕ್ಷನ್ಸ್, ರಜನಿಕಾಂತ್ ಅಭಿನಯದ ಟಿಜೆ ಜ್ಞಾನವೇಲ್ ಅವರ ಕಾಪ್ ಡ್ರಾಮಾ `ವೆಟ್ಟೈಯಾನ್‘ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಅದೇ ವಾರದಲ್ಲಿ ಅಕ್ಟೋಬರ್ 10 ರಂದು ಸೂರ್ಯ ಅಭಿನಯದ ಕಂಗುವ ರಿಲೀಸ್ ಆಗುತ್ತಿದೆ. ಈ ಎರಡೂ ಸಿನಿಮಾಗಳು ಕ್ಲಾಶ್ ಆಗೋದು ಪಕ್ಕಾ ಆದಂತಿದೆ.
ಲೈಕಾ ಪ್ರೊಡಕ್ಷನ್ಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್ ವೆಟ್ಟೈಯನ್ ಬಿಡುಗಡೆ ದಿನಾಂಕದ ಜೊತೆಗೆ ಪೊಲೀಸ್ ಸಮವಸ್ತ್ರದಲ್ಲಿ ಇರುವ ರಜನಿಕಾಂತ್ ಅವರ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದೆ. “ಟಾರ್ಗೆಟ್ ಲಾಕ್ಡ್ ವೆಟ್ಟೈಯಾನ್ ಅಕ್ಟೋಬರ್ 10, 2024 ರಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬೇಟೆಯಾಡಲು ಸಿದ್ಧವಾಗಿದೆ! ಸೂಪರ್‌ಸ್ಟಾರ್ ಸೂಪರ್‌ಕಾಪ್ ಆಗಿ! ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದ ಕನ್ನಡದ ‘ಮಾರ್ಟಿನ್’ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ!” ಎಂದು ಬರೆದುಕೊಂಡಿದೆ ಎನ್ನಲಾಗಿದೆ.
ರಜನಿಕಾಂತ್ ಅವರ 170 ನೇ ಚಿತ್ರವಾಗಿರುವ ವೆಟ್ಟೈಯಾನ್, ಅಮಿತಾಭ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಸೇರಿದಂತೆ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ರಜನಿಕಾಂತ್ ಮತ್ತು ಅಮಿತಾಭ್ ಅವರ 1991 ರ ಬಾಲಿವುಡ್ ಚಲನಚಿತ್ರ ʻಹಮ್ʼ ನಂತರ 33 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಂದಾಗಿದ್ದಾರೆ.
ಕಂಗುವ ಜತೆ ಕ್ಲ್ಯಾಶ್
ಸ್ಟುಡಿಯೋ ಗ್ರೀನ್ ನಿರ್ಮಿಸಿದ, ʻಕಂಗುವʼ 1,500 ವರ್ಷಗಳ ಹಿಂದಿನ ಕಥಾಹಂದರವನ್ನು ಒಳಗೊಂಡಿದೆ. ಬಾಬಿ ಡಿಯೋಲ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ತಾರಾಗಣದಲ್ಲಿ ದಿಶಾ ಪಟಾನಿ, ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ ಮತ್ತು ಆನಂದ ಕೂಡ ಇದ್ದಾರೆ.
ನಿರ್ಮಾಪಕರು ಇತ್ತೀಚೆಗೆ ಚಿತ್ರದ ಟ್ರೈಲರ್ ಅನಾವರಣಗೊಳಿಸಿದರು.ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಅಮೆಜಾನ್ ಪ್ರೈಂ ಸಂಸ್ಥೆ ಬರೋಬ್ಬರಿ 80 ಕೋಟಿ ರೂ. ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.ಕಂಗುವ ಅಕ್ಟೋಬರ್ 10ರಂದು ಥಿಯೇಟರ್‌ಗಳಿಗೆ ಬರಲಿದೆ.
Post a comment
Log in to write reviews