ಜಗತ್ತಿನ ಅತಿ ಎತ್ತರದ ಮತದಾನ ಕೇಂದ್ರ ಎಂಬ ಹೆಗ್ಗಳಿಕೆ ಪಡೆದ ತಾಶಿಗಾಂಗ್ ನಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಹಿಮಚ್ಛಾದಿತ ಈ ಪುಟ್ಟ ಹಳ್ಳಿಯಲ್ಲಿ 62 ಜನ ಮತದಾರರಿದ್ದಾರೆ.
ಅಂತಿಮ ಹಂತದ ಲೋಕಸಭೆ ಚುನಾವಣೆಗೆ ಈ ಗ್ರಾಮದಲ್ಲಿ ಮತ ಚಲಾಯಿಸುತ್ತಿದ್ದಾರೆ. ಹಿಮಾಲಯ ಪರ್ವತ ಶ್ರೇಣಿಯ 15,256 ಅಡಿ ಎತ್ತರದಲ್ಲಿ ಈ ಮತದಾನ ಕೇಂದ್ರವಿದೆ. 62 ಮತದಾರರು ಶನಿವಾರ ಅವರ ಹಕ್ಕು ಚಲಾಯಿಸುತ್ತಿದ್ದಾರೆ. ನೆರೆಯ ಗೆಟೆ ಗ್ರಾಮದ ಮತದಾರರೂ ಈ ಬೂತ್ ವ್ಯಾಪ್ತಿಗೆ ಬರುತ್ತಾರೆ. ಕುಡಿಯುವ ನೀರಿನ ಕೊರತೆ ಮತ್ತು ನಿರುದ್ಯೋಗ ಸಹಿತ ಬಹಳಷ್ಟು ಸಮಸ್ಯೆಗಳನ್ನು ಈ ಭಾಗದ ಮತದಾರರು ಎದುರಿಸುತ್ತಿದ್ದು, ತಾಪಮಾನ ಬದಲಾವಣೆಯ ಸಂಕಷ್ಟಕ್ಕೂ ಈ ಗ್ರಾಮ ಒಳಗಾಗಿದೆ.
Post a comment
Log in to write reviews