ದೆಹಲಿ: ನಾವೆಲ್ಲರೂ ಒಟ್ಟಾಗಿ ಹಸಿರು ಯುಗದತ್ತ ಹೆಜ್ಜೆ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಔಟ್ ರೀಚ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಯಲ್ಲಿ ಸಹಕಾರಿ ಪ್ರಯತ್ನಗಳಿಗೆ ಕರೆ ನೀಡಿದ್ದು ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಾರತವು ಮಾನವ-ಕೇಂದ್ರಿತ ವಿಧಾನದ ಕಡೆಗೆ ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನದ ಪ್ರಯೋಜನಗಳನ್ನು ವಿವರಿಸುವಾಗ ಪ್ರಧಾನಿ ಮೋದಿ ಅವರು ಸೈಬರ್ ಭದ್ರತೆಯ ಸವಾಲುಗಳಿಗೆ ಒತ್ತು ನೀಡಿದ್ದಾರೆ.
ತಂತ್ರಜ್ಞಾನವನ್ನು ಸೃಜನಾತ್ಮಕ ಉದ್ದೇಶಗಳಿಗಾಗಿ ಬಳಸಬೇಕೇ ಹೊರತು ವಿನಾಶಕಾರಿ ಉದ್ದೇಶಗಳಿಗಲ್ಲ. ಆಗ ಮಾತ್ರ ನಾವು ಅಂತರ್ಗತ ಸಮಾಜದ ಅಡಿಪಾಯವನ್ನು ಹಾಕಲು ಸಾಧ್ಯವಾಗುತ್ತದೆ. ಈ ಮಾನವ ಕೇಂದ್ರಿತ ವಿಧಾನದ ಮೂಲಕ ಭಾರತವು ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದೆ. ಈ ಕಾರ್ಯತಂತ್ರದ ಆಧಾರದ ಮೇಲೆ ನಾವು ಈ ವರ್ಷ AI ಮಿಷನ್ ಅನ್ನು ಪ್ರಾರಂಭಿಸಿದ್ದೇವೆ ಎಂದು G7 ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
Post a comment
Log in to write reviews