Samayanews.

Samayanews.

2024-12-24 12:52:54

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಕಿಂಗ್‌ ಸ್ಟಾರ್‌ ಜೊತೆ ಏನೆಲ್ಲಾ ಮಾಡಬೇಕೆಂಬ ಮನದಾಸೆ ಬಿಚ್ಚಿಟ್ಟ ಈ ಬೋಲ್ಡ್‌ ಹಿರೋಯಿನ್‌ ಯಾರು?

ಗಾಯಕಿಯಾಗಿ ಮಾತ್ರವಲ್ಲದೆ ನಟಿಯಾಗಿಯೂ ಮಿಂಚುತ್ತಿದ್ದಾರೆ ಈ ನಟಿ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದಕ್ಕೆ ಕಾರಣವೇ ಅವರ ಬೋಲ್ಡ್​ ಫೋಟೋಶೂಟ್.  ಕಡಿಮೆ ಬಟ್ಟೆ ಹಾಕಿಕೊಂಡು ದಿನನಿತ್ಯವೂ ಟ್ರೋಲ್​ ಆಗುತ್ತಲೇ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ ಈ ನಟಿ. ದೊಡ್ಡ ದೊಡ್ಡ ಸಮಾರಂಭಗಳಲ್ಲಿಯೂ ತುಂಡು ಬಟ್ಟೆ. ಅಭಿಮಾನಿಗಳಿಗೆ ತೀರಾ ಮುಜುಗರ ಹಾಗೂ ಶಾಕಿಂಗ್​ ಆಗುವಂಥ ಬಟ್ಟೆ ಧರಿಸುವುದು ಈಕೆಗೀಗ ಮಾಮೂಲಾಗಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಇಂಥ ಬಟ್ಟೆ ತೊಟ್ಟು ಸಕತ್​ ಆ್ಯಕ್ಟೀವ್​ ಆಗಿರ್ತಾರೆ ಈ ನಟಿ. ಸದ್ಯ ಈಗ ಮಾರ್ನಮಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಈ ನಟಿ ಚಿತ್ತಾರ ರೈಸಿಂಗ್​ ಸ್ಟಾರ್​ ಅವಾರ್ಡ್​ ರೈಸಿಂಗ್​ ಸ್ಟಾರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಯಶ್​ ಜೊತೆಗೆ ತಾವು ನಟನೆ ಮಾಡಬೇಕು ಎನ್ನುವ ಆಸೆಯನ್ನು ಹೊರಕ್ಕೆ ಹಾಕಿದರು. ಇಂಥ ಪ್ರಶಸ್ತಿ ಪಡೆದುಕೊಳ್ಳುವಾಗ ಶಿಫಾರಸು ಮಾಡಬೇಕು ಎಂದೆಲ್ಲಾ ಆರಂಭದಲ್ಲಿ ಕೇಳಿದ್ದೆ. ಆದರೆ ಈಗ ನನಗೂ ಈ ಅವಾರ್ಡ್​ ಬಂದ ಕಾರಣದಿಂದ ಅವೆಲ್ಲಾ ಸುಳ್ಳು ಎಂದು ಗೊತ್ತಾಯಿತು. ನಮ್ಮ ಕೆಲಸವನ್ನು ನಮ್ಮ ಪಾಡಿಗೆ ಮಾಡಿಕೊಂಡು ಹೋದರೆ ಎಲ್ಲರೂ ಗುರುತಿಸುತ್ತಾರೆ ಎಂದು ತಿಳಿಯಿತು. ಅವಾರ್ಡ್​ ಪಡೆಯಬೇಕು ಎಂದು ನಾನು ನಟಿಸಿಲ್ಲ. ಆದರೆ ಅದೇ ನನ್ನನ್ನು ಹುಡುಕಿ ಬಂದಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ ಬೋಲ್ಡ್‌ ನಟಿ ಚೈತ್ರಾ.

ಇದೇ ವೇಳೆ, ಯಾವ ನಟ ನಿಮಗೆ ಇಷ್ಟ ಎಂಬ ಪ್ರಶ್ನೆ ಎದುರಾದಾಗ, ತುಂಬಾ ನಟರು ಇದ್ದಾರೆ. ಆದರೆ ಯಶ್​ ನನ್ನ ಫೆವರೆಟ್​ ನಟ. ಅವರ ಎಲ್ಲಾ ಸಿನಿಮಾಗಳನ್ನೂ ನೋಡಿದ್ದೇನೆ. ಯಾವ ಪಾತ್ರ ಕೊಟ್ಟರೂ ಅವರ ಜೊತೆ ಮಾಡಲು ರೆಡಿ ಎಂದಿದ್ದಾರೆ. ಹಾಗಿದ್ದರೆ ಅಕ್ಕ-ತಂಗಿ, ಚಿಕ್ಕಮ್ಮ ಇಂಥ ಪಾತ್ರ ಓಕೆನಾ ಎಂದಾಗ ಇಲ್ಲಪ್ಪಾ ಅವೆಲ್ಲಾ ಬೇಡ, ಎದುರು ಮನೆ, ಹಿಂದಿನ ಮನೆ, ಅತ್ತೆ-ಮಗಳು ಇಂಥ ಪಾತ್ರಗಳು ನನಗೆ ಬೇಕು ಎನ್ನುವ ಮೂಲಕ ಯಶ್​ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುವ ಆಸೆಯನ್ನು ಚೈತ್ರಾ ಹೊರಕ್ಕೆ ಹಾಕಿದ್ದಾರೆ. ಮುಂಬರುವ ಟಾಕ್ಸಿಕ್​ ಚಿತ್ರದಲ್ಲಿ ತಮಗೆ ಅವಕಾಶ ಸಿಗಲಿ ಎಂದು ಆಸೆ ಪಟ್ಟಿದ್ದಾರೆ ಎಂನ್ನುವುದು ಸ್ಪಷ್ಟವಾಗಿದೆ.  

ಅಂದಹಾಗೆ ಚೈತ್ರಾ ಅವರ ಸಿನಿ ಜರ್ನಿ ಕುರಿತು ಹೇಳುವುದಾದರೆ,  ಇವರು 'ಮಹಿರಾ' ಎಂಬ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಅವರಿಗೆ ತುಂಬಾ ಆಫರ್​ ಸಿಕ್ಕಿದೆ. 'ತಲೆ ದಂಡ', 'ಗಿಲ್ಕಿ', 'ಅದೃಶ್ಯ' ಮೊದಲಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.  'ಟೋಬಿ' ಮತ್ತು 'ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳು ಚೈತ್ರಾಗೆ ದೊಡ್ಡ ಬ್ರೇಕ್​ ಕೊಟ್ಟಿವೆ.  ಅದರಲ್ಲಿಯೂ  'ಟೋಬಿ' ಚಿತ್ರದಲ್ಲಿನ ಇವರ ನಟನೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಚಿತ್ರಕ್ಕಾಗಿ ನಟಿಗೆ  ಫಿಲಂ ಫೇರ್ ಅವಾರ್ಡ್‌ ಕೂಡ ಸಿಕ್ಕಿದೆ. ಕೇವಲ ನಟಿ ಮಾತ್ರವಲ್ಲದೇ, ಈಕೆ ಗಾಯಕಿಯೂ ಹೌದು.  'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ.  ಸದ್ಯಕ್ಕೆ ನಟಿಗೆ ಯಶ್​ ಜೊತೆ ನಟಿಸೋ ಭಾಗ್ಯ ಸಿಗುವುದೋ ಎಂದು ಕಾದು ನೋಡಬೇಕಿದೆ.

 

img
Author

Post a comment

No Reviews