Samayanews.

Samayanews.

2024-11-14 10:41:52

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಚಿಕನ್​​ ಕರಿ ಕೇಳಿದ್ದಕ್ಕೆ ಗಂಡನನ್ನ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಪತ್ನಿ

ಉತ್ತರ ಪ್ರದೇಶ: ಮಹಿಳೆಯೊಬ್ಬಳು ತನ್ನ ಗಂಡನ ತಲೆಯನ್ನು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಂದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

ಗುರುವಾರ ನಡೆದ ಈ ಭೀಕರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಮಹಿಳೆ ತನ್ನ ಗಂಡನ ಮೇಲೆ ಕುಳಿತು ಆತನ ತಲೆಗೆ ಇಟ್ಟಿಗೆಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದ್ದು, ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ದೈನಿಕ್ ಭಾಸ್ಕರ್ ಅವರ ವರದಿಯ ಪ್ರಕಾರ, ಗಂಡ ಪದೇ ಪದೇ ಮಾಂಸಾಹಾರ ತಯಾರಿಸಲು ಹೇಳುತ್ತಿದ್ದ, ಇದರಿಂದ ಕೋಪಗೊಂಡ ಪತ್ನಿ ಆತನನ್ನೇ ಭೀಕರವಾಗಿ ಕೊಂದು ಹಾಕಿದ್ದಾಳೆ ಎಂದು ತಿಳಿದುಬಂದಿದೆ.

ಸತ್ಯಪಾಲ್ (40) ಮತ್ತು ಗಾಯತ್ರಿ ದೇವಿ (39) ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಹತೌಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಗಳು ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ.

ವರದಿಯ ಪ್ರಕಾರ, ಗಾಯತ್ರಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಿದ್ದ. ಇದಲ್ಲದೇ ಆಗಾಗ ಮನೆಯಲ್ಲಿ ಚಿಕನ್​ ಮಾಂಸಾಹಾರ ತಯಾರಿಸುವಂತೆ ಹೆಂಡತಿಯ ಬಳಿ ಹೇಳುತ್ತಿದ್ದ. ಇದರಿಂದಾಗಿ ಆಗಾಗ ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿತ್ತು. ಗುರುವಾರ ಸತ್ಯಪಾಲ್ ಮತ್ತೆ ಮಾಂಸಾಹಾರಕ್ಕೆ ಬೇಡಿಕೆ ಇಟ್ಟಿದ್ದಾನೆ. ಗಾಯತ್ರಿ ನಿರಾಕರಿಸಿದಾಗ, ಅವರಿಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಜಗಳದ ನಡುವೆ ಗಾಯತ್ರಿ ಇಟ್ಟಿಗೆ ಎತ್ತಿಕೊಂಡು ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ. ಸತ್ಯಪಾಲ್ ಹೊರಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಗಾಯತ್ರಿ ಅವನನ್ನು ಹಿಂಬಾಲಿಸಿ, ನೆಲಕ್ಕೆ ಕೆಡವಿ, ನಂತರ ಅವನ ಎದೆಯ ಮೇಲೆ ಕುಳಿತು, ಪಟ್ಟುಬಿಡದೆ ಇಟ್ಟಿಗೆಯಿಂದ ಅವನ ತಲೆಗೆ ಹೊಡೆದಿದ್ದಾಳೆ. ಅವಳ  ಹೊಡೆತ್ತಕ್ಕೆ  ಏಟಿಗೆ ಆತನ ಮೆದುಳು ಹೊರಬಂದಿದೆ.

ಗಾಯತ್ರಿ ಈ ಹಿಂದೆ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಸತ್ಯಪಾಲ್ ಅವರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದು ಗಾಯತ್ರಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಗಳು ಮಹಿಳೆಯು ಇನ್ನೂ ಮಾನಸಿಕವಾಗಿ ಅಸ್ಥಿರವಾಗಿರಬಹುದು ಎಂದು ಸೂಚಿಸಿದೆ.

 

img
Author

Post a comment

No Reviews