ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಸರ್ವಾಧಿಕಾರಿಗಳಿಂದ ದೇಶವನ್ನು ರಕ್ಷಿಸಬೇಕಿದೆ. ನನಗೆ ಜಾಮೀನು ನೀಡಿದ ಸುಪ್ರಿಂ ಕೋರ್ಟ್‌ಗೆ ನ್ಯಾಯಾಧೀಶರಿಗೆ ಧನ್ಯವಾದಗಳು ಎಂದರು.
‘ನಾನು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದೇನೆ ಎಂದು ನಿಮಗೆ ಹೇಳಿದ್ದೆ. ಅದರಂತೆ ನಾನು ಹೊರ ಬಂದಿದ್ದೇನೆ. ಶನಿವಾರ ನಾನು ಹನುಮನ ದೇಗುಲಕ್ಕೆ ಭೇಟಿ ನೀಡಲಿದ್ದೇನೆ. ನನ್ನ ಜೊತೆ ನೀವು ದೇಗುಲಕ್ಕೆ ಬರಬೇಕು’ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ದೇಗುಲ ದರ್ಶನದ ನಂತರ ಎಎಪಿ ಕಚೇರಿಯಲ್ಲಿ ಮಧ್ಯಾಹ್ಣ 1 ಗಂಟೆಗೆ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ.
Post a comment
Log in to write reviews