ಮಾಜಿ ಸಿಎಂ ಅವರ ಮೇಲೆ ಪೊಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಉಸಿರಾಟದ ಸಮಸ್ಯೆಯ ಕಾರಣ ಹೇಮಾ ಎಂಬುವರನ್ನು ಮೇ. 26 ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೂಡಲೇ ವೈದ್ಯರು ಚಿಕಿತ್ಸೆ ಶುರು ಮಾಡಿದ್ದರು, ತಪಾಸಣೆ ವೇಳೆ ರಕ್ತದೊತ್ತಡ ಕಡಿಮೆ ಆಗಿದ್ದು ಚಿಕಿತ್ಸೆ ಸಮಯದಲ್ಲಿ ಸ್ಯಾಚುರೇಷನ್ ಲೇವೆಲ್ ಕಂಟ್ರೊಲ್ ಬಂದಿರಲಿಲ್ಲ. ವೆಂಟಿಲೇಟರ್ ಶಿಫ್ಟ್ ಮಾಡಲು ಸಿದ್ಧತೆ ಮಾಡುವಷ್ಟರಲ್ಲಿ ಪ್ರಾಣ ಹೋಗಿದೆ ಎಂದು ತಿಳಿದು ಬಂದಿದೆ.
ಕೆಲ ತಿಂಗಳ ಹಿಂದೆ ನ್ಯಾಯ ಕೊಡಿಸುವಂತೆ ಮಾಜಿ ಸಿಎಂ ಬಿಎಸ್‌ವೈ ಮನೆಗೆ ಹತ್ತಾರು ಬಾರಿ ಮಗಳೊಂದಿಗೆ ಹೋದ ಹೇಮಾಗೆ ನ್ಯಾಯ ಒದಗಿಸುವಂತೆ ನಗರದ ಪೊಲೀಸ್ ಕಮಿಷನರ್ ಗೆ ಬಿಎಸ್‌ವೈ ಸೂಚನೆ ನೀಡಿದ್ದರು. ಆದರೆ ಕೆಲ ದಿನದ ನಂತರ ಸದಾಶಿವನಗರ ಪೋಲಿಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ದವೇ ಹೇಮಾ ಅವರು ಪೊಕ್ಸೋ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ಕೂಡಾ ದಾಖಲಾಗಿತ್ತು. ಈಗ ಹೇಮಾಳ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಖಾಸಗಿ ಆಸ್ಪತ್ರೆಯಿಂದ ಮೃತ ದೇಹ ತೆಗೆದುಕೊಂಡು ಹೋಗಿರುವ ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾರೆ.
Post a comment
Log in to write reviews