ನವದೆಹಲಿ, ಅಕ್ಟೋಬರ್ 7: ಹಿಂದೆಲ್ಲಾ ರಾಜ ಮಹಾರಾಜರು ಸಾಮಾನ್ಯ ಪ್ರಜೆಯ ಹಾಗೆ ಮಾರುವೇಷ ಹಾಕಿಕೊಂಡು ತಮ್ಮ ನಾಡಿನ ಸಮಸ್ಯೆಗಳನ್ನು ತಿಳಿಯಲು ಯತ್ನಿಸುತ್ತಿದ್ದರು. ಕಾರ್ಪೊರೇಟ್ ಕಂಪನಿಗಳಲ್ಲೂ ಕೆಲ ಎಕ್ಸಿಕ್ಯೂಟಿವ್ಗಳು ಇಂಥ ಕೆಲಸ ಮಾಡುವುದು ಇದೆ. ಕೆಫೆ ಕಾಫಿ ಡೇ ಸಂಸ್ಥಾಪಕರಾಗಿದ್ದ ದಿವಂಗತ ಸಿದ್ಧಾರ್ಥ್ ಹೆಗ್ಡೆ ಸಾಮಾನ್ಯರ ಹಾಗೆ ಯಾವುದಾದರೂ ಕಾಫಿ ಡೇ ಯೂನಿಟ್ಗೆ ಹೋಗಿ ಕಾಫಿ ಕುಡಿದು ಬರುತ್ತಿದ್ದರಂತೆ. ಇಂಥವರ ಪಟ್ಟಿಗೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರನ್ನೂ ಸೇರಿಸಬಹುದು. ಜೊಮಾಟೊ ಬಿಸಿನೆಸ್ನ ಪ್ರಮುಖ ಭಾಗವಾಗಿರುವ ಡೆಲಿವರಿ ಬಾಯ್ಗಳ ಕಷ್ಟ ಏನೆಂದು ಖುದ್ದಾಗಿ ತಿಳಿಯಲು ದೀಪಿಂದರ್ ಗೋಯಲ್ ತಾವೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಈ ವೇಳೆ ಆದ ಕೆಲ ಅನುಭವಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಗುರುಗ್ರಾಮ್ನ ಪ್ರತಿಷ್ಠಿತ ಏಂಬಿಯನ್ಸ್ ಮಾಲ್ಗೆ ಹೋಗಿದ್ದಾಗಿನ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎರಡನೇ ಪತ್ನಿ ಗ್ರೇಷಿಯಾ ಮುನೋಜ್ ಜೊತೆ ಸೇರಿ ಡೆಲಿವರಿ ಬಾಯ್ನಂತೆ ಏಂಬಿಯನ್ಸ್ ಮಾಲ್ಗೆ ಹೋಗಿದ್ದರು. ಅಲ್ಲಿ ಹಲ್ದೀರಾಮ್ ಸ್ಟೋರ್ನಿಂದ ಆರ್ಡರ್ ಕಲೆಕ್ಟ್ ಮಾಡಲು ಲಿಫ್ಟ್ ಅಥವಾ ಎಲಿವೇಟರ್ ಬಳಸಲು ಹೋಗುತ್ತಾರೆ. ಅಲ್ಲಿದ್ದ ಸೆಕ್ಯೂರಿಟಿಯವರು ತಡೆದು, ಮೆಟ್ಟಿಲುಗಳ ಮೂಲಕ ಹೋಗುವಂತೆ ಸೂಚಿಸುತ್ತಾರೆ.
ದೀಪಿಂದರ್ ಗೋಯಲ್ ಸ್ಟೇರ್ ಕೇಸ್ ಬಳಸಿ ಹಲ್ದೀರಾಮ್ಸ್ ಇದ್ದ 3ನೇ ಫ್ಲೋರ್ಗೆ ಹೋಗುತ್ತಾರೆ. ಡೆಲಿವರಿ ಹುಡುಗರು ಸ್ಟೇರ್ಕೇಸ್ಗೆ ಮಾತ್ರ ಸೀಮಿತ ಇರಬೇಕು. ಮಾಲ್ನೊಳಗೆ ಪ್ರವೇಶ ಇಲ್ಲ ಎನ್ನುವ ವಿಚಾರ ಜೊಮಾಟೊ ಸಿಇಒಗೆ ತಿಳಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸ್ಟೇರ್ಕೇಸ್ನಲ್ಲಿ ಕೂತು ಇತರ ಡೆಲಿವರಿ ಬಾಯ್ಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು
Post a comment
Log in to write reviews