ಇಂಟರ್ ಪೋಲ್ ಆರ್ಗನೈಜೇಷನ್ ಒಳಗೆ ನಮ್ಮ ದೇಶ 1949 ರಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದೆ. ಈ ಇಂಟರ್ ಪೋಲ್ ಆರ್ಗನೈಜೇಷನ್ ಅಡಿಯಲ್ಲಿ ಒಟ್ಟು 195 ದೇಶಗಳು ಇವೆ. ಇಂಟರ್ ಪೋಲ್ ನಲ್ಲಿ ರೆಡ್ ಕಾರ್ನರ್ ನೋಟಿಸ್, ಯೆಲ್ಲೋ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್, ಬ್ಲಾಕ್ ಕಾರ್ನರ್ ನೋಟಿಸ್, ಗ್ರೀನ್ ಕಾರ್ನರ್ ನೋಟಿಸ್, ಆರೆಂಜ್ ಕಾರ್ನರ್ ನೋಟಿಸ್, ಪರ್ಪಲ್ ಕಾರ್ನರ್ ನೋಟಿಸ್, ಸೇರಿದಂತೆ ಒಟ್ಟು 7 ನೋಟಿಸ್ ಗಳಿದ್ದು, ಆಯಾ ಪ್ರಕರಣಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಸೂಕ್ತ ನೋಟಿಸ್‌ಅನ್ನು ಜಾರಿಗೊಳಿಸುತ್ತಾರೆ.
ಇದುವರೆಗೂ ರೆಡ್ ಕಾರ್ನರ್ ನೋಟಿಸ್‌ಗೆ ಒಳಗಾದ ಪ್ರಮುಖ ವ್ಯಕ್ತಿಗಳು ಯಾರ್ಯಾರು.?
ಇದುವರೆಗೆ ಹಲವಾರು ಕ್ರಿಮಿನಲ್ ವ್ಯಕ್ತಿಗಳಿಗೆ ಅಧಿಕಾರಿಗಳು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ, ಈ ಹಿಂದೆ ಅದರ ಬಗ್ಗೆ ನಮಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಸದ್ಯ ಈಗ ಪ್ರಜ್ವಲ್ ಪ್ರಕರಣದಿಂದಾಗಿ ಈ ನೋಟಿಸ್ ಬಗ್ಗೆ ಚಚೆ೯ ಮಾಡುವಂತಾಗಿದೆ. ಈ ಹಿಂದೆ 2021 ರ ವರೆಗೆ ದೇಶದಲ್ಲಿ 10,776 ವ್ಯಕ್ತಿಗಳ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು, ಈಗ ಪ್ರಸ್ತುತ ದೇಶದಲ್ಲಿ ಭಾರತವು ಹೊರಡಿಸಿರುವ ಒಟ್ಟು 778 ರೆಡ್ ಕಾರ್ನರ್ ನೋಟಿಸ್ ಗಳು ಸಕ್ರಿಯವಾಗಿದೆ. ಅದರಲ್ಲಿ 205 ರೆಡ್ ಕಾರ್ನರ್ ನೋಟಿಸ್ ಗಳನ್ನ ಹೊರಡಿಸಲಾಗಿದೆ. ದಾವೂದ್ ಇಬ್ರಾಹಿಂ ಸೇರಿದಂತೆ ಆತನ ಸಹಾಯಕ ಛೋಟಾ ಶಕೀಲ್ ಭಯೋತ್ಪಾದಕ ಮಸೂದ್ ಆಜರ್ ನೀರವ್ ಮೋದಿ, ಹಾಗೂ ಅವರ ತಂಗಿ ಪೂರ್ವಿ ಮೋದಿ ಪರಾರಿಯಾಗಿರುವ ಹಲವಾರು ಜನರ ವಿರುದ್ದ ಸಿ ಬಿ ಐ ಅಧಿಕಾರಿಗಳು ರೆಡ್ ಕಾರ್ನರ್ ನೋಟಿಸ್ ಅನ್ನು ಹೊರಡಿಸಿದ್ದಾರೆ.
ಈ ಹಿಂದೆ ಸರಿಯಾದ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖಲಿಸ್ಥಾನ್ ಗಳ ಸಿಖ್ಸ್ ಫಾರ್ ಜಸ್ಟೀಸ್ ನ ಲೀಗಲ್ ಅಡ್ವೈಸರ್ ಆದ ಗುರು ಪತ್ವಂತ್ ಸಿಂಗ್ ಪನ್ನೂನ್ ವಿರುದ್ಧವಾಗಿ ಭಾರತದ ಹೊರಡಿಸಿದ್ದ ರೆಡ್ ಕಾರ್ನ್ ರ್ ನೋಟಿಸ್ ಅನ್ನು ಇಂಟರ್ ಪೋಲ್ 2 ಬಾರಿ ತಿರಸ್ಕರಿಸಿದೆ.
ಪ್ರಸ್ತುತ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಗೆ ಎಸ್ ಐ ಟಿ ಲುಕ್ ಔಟ್ ನೋಟಿಸ್ ಹಾಗೂ ಬ್ಲೂ ನೋಟಿಸ್ ಜಾರಿ ಮಾಡಿದ್ದರು. ಸದ್ಯ ಈಗ ಎಸ್ ಐ ಟಿ ಪ್ರಜ್ವಲ್ ರೇವಣ್ಣ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಮುಂದಾಗಿದೆ.
Post a comment
Log in to write reviews