ಆ್ಯಸಿಡಿಟಿ, ಮಲಬದ್ಧತೆ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೆ ಓಂಕಾಳು ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವುಗಳು ನಮ್ಮ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಸಂಭವಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಓಂಕಾಳು ಸಹಾಯ ಮಾಡುತ್ತದೆ. ಜೀರ್ಣವಾಗದ ಆಹಾರ ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಕೂಡ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರ ಮುಖಾಂತರ ಈ ತೊಂದರೆಯಿಂದ ನೀವು ಹೊರಬರಬಹುದು.
ಓಂ ಕಾಳುಗಳನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಹಾಗೂ ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿ ಮಾಡಿಕೊಳ್ಳಬಹುದು. ಓಂ ಕಾಳುಗಳನ್ನು ಸ್ವಲ್ಪ ಹುರಿದು ನಂತರ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯುವದರಿಂದ ಜೀಣ೯ಕ್ರಿಯೆ ಸರಿಹೊಗುತ್ತದೆ. ಹಾಗಾಗಿ ಓಂಕಾಳು ಆರೋಗ್ಯಕ್ಕೆ ಬಹು ಉಪಯುಕ್ತ.
Post a comment
Log in to write reviews