ಪ್ರತಿದಿನ ಬೆಳಿಗ್ಗೆ ನೆನೆಸಿದ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಉಪಯೋಗಗಳಿವೆ.
ಒಣದ್ರಾಕ್ಷಿ ನೀರಿನಲ್ಲಿ ಬಹಳಷ್ಟು ಫೈಬರ್ ಕಂಡುಬರುತ್ತದೆ. ಇದು ನಿಮ್ಮ ಹೊಟ್ಟೆಯನ್ನಆರೋಗ್ಯವಾಗಿಡುವ ಮೂಲಕ, ಸರಿಯಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಹಾಗೆಯೇ ಯಕೃತ್ತಿನ ಸಮಸ್ಯೆಗಳನ್ನು ಗುಣಪಡಿಸಲು ನಿಮಗೆ ತುಂಬಾ ಸಹಾಯ ಮಾಡುತ್ತದೆ. ಒಣದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಎದ್ದ ನಂತರ ಅದರ ನೀರನ್ನು ಕುಡಿಯಬೇಕು. ಒಣದ್ರಾಕ್ಷಿಯಲ್ಲಿ ಹೇರಳವಾದ ಕಬ್ಬಿಣ, ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಒಂದು ಲೋಟ ನೆನೆಸಿದ ಒಣದ್ರಾಕ್ಷಿ ಹಣ್ಣುಗಳ ನೀರು ನಮ್ಮ ದೇಹ ಸೇರುವುದರಿಂದ ನಮ್ಮ ಹಲ್ಲುಗಳ ಆರೋಗ್ಯ ಸಹ ಅಭಿವೃದ್ಧಿಯಾಗುತ್ತದೆ.
Post a comment
Log in to write reviews