ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಯಂತ್ರಣಕ್ಕೆ ಜಿಪಿಎಸ್ ಆಧಾರಿತ 'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಅಪ್ಲಿಕೇಶನ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೊಳಿಸಿದ್ದರೂ ಕೂಡ ಧೂಮಪಾನಿಗಳ ಹಾವಳಿ ನಿಂತಿಲ್ಲ. ಇದಕ್ಕಾಗಿ ಧೂಮಪಾನ ನಿಯಂತ್ರಣಕ್ಕೆ 'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಅಫ್ಲೀಕೇಶನ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕಂಡುಬಂದರೆ, ಅವರ ಛಾಯಾಚಿತ್ರ ತೆಗೆದು ಅದನ್ನು ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದನ್ನು ವೀಕ್ಷಿಸುವ ತಂಬಾಕು ನಿಯಂತ್ರಣ ಕೋಶದ ತಂಡ ಸ್ಥಳಕ್ಕೆ ಧಾವಿಸಿ, ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತದೆ.
ಆ್ಯಪ್ ಮುಲಕ ಅರ್ಜಿಸಲ್ಲಿಸುವ ವಿಧಾನ
ಸಾರ್ವಜನಿಕರು ತಮ್ಮ ಮೊಬೈಲ್‌ನ ಪ್ಲೇ ಸ್ಟೋರ್ನಲ್ಲಿ ಟೊಬ್ಯಾಕೋ ಎಂದು ಟೈಪ್ ಮಾಡಿ, ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆ್ಯಪ್ನಲ್ಲಿ ಕಾಣಿಸುವ ರಿಜಿಸ್ಟರ್ ಕಂಪ್ಲೆಂಟ್ ಎಂಬುದನ್ನು ಒತ್ತಿ, ಧೂಮಪಾನ ಮಾಡುತ್ತಿರುವ ವ್ಯಕ್ತಿಗಳು ಇರುವ ಸ್ಥಳದ ಫೋಟೋ ತೆಗೆದು, ತಮ್ಮ ಹೆಸರು, ಜಿಲ್ಲೆ ಮತ್ತು ಡ್ರಾಪ್ ಸ್ಟಾಪ್ ಟೊಬ್ಯಾಕೋ ಬಾಕ್ಸ್ನಲ್ಲಿರುವ ಯಾವ ರೀತಿಯ ದೂರು ಎಂಬುದನ್ನು ಆಯ್ಕೆ ಮಾಡಿಕೊಂಡು, ಧೂಮಪಾನ ಮಾಡುತ್ತಿರುವ ಸ್ಥಳದ ವಿಳಾಸ, ತಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರ ಭರ್ತಿ ಮಾಡಿ ಸಲ್ಲಿಸಬೇಕು. ನಂತರ ಆ್ಯಪ್ನಲ್ಲಿ ಕಾಣಿಸುವ ರಿಜಿಸ್ಟರ್ ಕಂಪ್ಲೆಂಟ್ ಒತ್ತಿ ಧೂಮಪಾನ ಮಾಡುತ್ತಿರುವ ವ್ಯಕ್ತಿಗಳು ಇರುವ ವಿಳಾಸ, ತಮ್ಮ ಸ್ಥಳದ ವಿವರ ಭರ್ತಿ ಮಾಡಬೇಕು. ಅಧಿಕಾರಿಗಳು ತಕ್ಷಣವೇ ಕ್ರಮಕ್ಕೆ ಮುಂದಾಗುತ್ತಾರೆ
ಸಾರ್ವಜನಿಕರು ಸಲ್ಲಿಸಿದ ದೂರು, ಆ ಜಿಲ್ಲೆಯ ತಂಬಾಕು ನಿಯಂತ್ರಣ ಅಧಿಕಾರಿಯ ಮೊಬೈಲ್ನಲ್ಲಿನ ಆ್ಯಪ್ ಗೆ ರವಾನೆಯಾಗುತ್ತದೆ. ಅವರು ತಕ್ಷಣವೇ ಘಟನಾ ಸ್ಥಳ ಹತ್ತಿರದ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಯ ಮೊಬೈಲ್ಗೆ ಆಪ್ ಮೂಲಕವೇ ಈ ದೂರನ್ನು ಕಳುಹಿಸಿ, ಪರಿಶೀಲನೆ ಮಾಡಲು ಸೂಚಿಸುತ್ತಾರೆ. ದೂರು ಪರಿಶೀಲನೆಗೆ ಆಗಮಿಸುವ ತಂಡ ಸಂಬಂಧಪಟ್ಟ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳು ಧೂಮಪಾನ ಮಾಡುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯಿಂದ ಮತ್ತು ಆ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟ ಅಂಗಡಿಯ ಮಾಲೀಕನಿಂದಲೂ ನಿಗದಿತ ದಂಡ ವಸೂಲಿ ಮಾಡುತ್ತಾರೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತಾರೆ.
Post a comment
Log in to write reviews