ಬೆಂಗಳೂರು. ಜೂನ್ 13: ಈಗಿನ ಆಹಾರ ಪದ್ದತಿ ವಿಭಿನ್ನವಾಗಿದ್ದು ಆರೋಗ್ಯ ಕೂಡ ಹದಗೆಡುತ್ತಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದರು.
ನಗರದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ "ಇನ್ ಕ್ರೆಡಿಬಲ್ ಚೆಫ್ ಚಾಲೆಂಜ್" ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು,
ಈ ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದ್ದು ಸಾರ್ವಜನಿಕರು ಹಾಗೂ ಹೋಟೆಲ್ ಮಾಲಿಕರು ಇದರ ಸದುಪಯೋಗವನ್ನು ಪಡೆಯಬೇಕೆ ಎಂದರು.
ಈಗಿನ ಜನರು ಪಾಸ್ಟ್ ಪುಡ್ ಕಡೆ ಹೆಚ್ಚಿನ ಒತ್ತು ನೀಡಿ ಆಹಾರ ಶೈಲಿಯಲ್ಲಿ ವಿಧ ವಿಧವಾದ ಪದಾರ್ಥಗಳ ಬಳಕೆ ಹೆಚ್ಚಾಗಿದೆ. ಹಿಂದಿನ ಕಾಲದ ಜನರು ರಾಗಿ, ನವಣೆ, ಸಜ್ಜೆ ಆರ್ಕಾ, ಮೊದಲಾದ ಧಾನ್ಯಗಳ ಬಳಕೆಯಿಂದ ಆರೋಗ್ಯ ಉತ್ತಮವಾಗಿತ್ತು ಎಂದರು.
ಪಾಲೀಶ್ ಭರಿತ ಅಕ್ಕಿಯ ಬಳಕೆಯಿಂದ ಸಾರ್ವಜನರಲ್ಲಿ ಮಧುಮೇಹ ದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ ಇವನ್ನು ತಡೆಯಲು ಹೆಚ್ಚಾಗಿ ರಾಗಿಯನ್ನು ಬಳಸಬೇಕೆಂದರು.
ಐಶಾರಾಮಿ ಹೋಟಲ್ ಗಳಲ್ಲಿ ಮದುವೆ ಮಂಟಪಗಳು, ಸಾರ್ವಜನಿಕ ಸಮಾರಂಭದಲ್ಲಿ ಜನರು ಆಹಾರ ವನ್ನು ಶೇಕಡಾ 10 ರಷ್ಟು ಪದಾರ್ಥಗಳನ್ನು ಬಿಟ್ಟು ವ್ಯರ್ಥ ಮಾಡುತ್ತಿದ್ದಾರೆ ಅದನ್ನು ತಡಯಲು ನಾವು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದರು.
ಆತಿಥ್ಯ, ಸಾರಿಗೆ ಹಾಗು ಪ್ರವಾಸೋದ್ಯಮ ಕ್ಷೇತ್ರಕ್ಕೆ ಇನ್ನೊಂದೇ ಹೆಸರೇ ನಮ್ಮ ಕರ್ನಾಟಕ ನಮ್ಮ ರಾಜ್ಯದ ಮುಕುಟ ಮಣಿಯಂತಿರುವ ಬೆಂಗಳೂರಿನಲ್ಲಿ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿದೆ.
ದಕ್ಷಿಣ ಭಾರತ ಬಾಣಸಿಗರ ಸಂಘ [ಎಸ್ಐಸಿಎ – SICA] ಸಹಯೋಗದಲ್ಲಿ ನಡೆಯಲಿರುವ ಅತಿ ನಿರೀಕ್ಷಿತ ಇನ್ಕ್ರೆಡಿಬಲ್ ಚೆಫ್ ಚಾಲೆಂಜ್ [ICC] ಈ ಪ್ರದರ್ಶನದ ಅತಿ ದೊಡ್ಡ ಆಕರ್ಷಣೆ. ಈ ಸ್ಪರ್ಧೆಯು ದೇಶದ ವಿವಿಧ ಹೋಟೆಲ್ ಮತ್ತು ಸಂಸ್ಥೆಗಳ ಯುವ ಪಾಕಶಾಲೆಯ ಪ್ರತಿಭೆಗಳಳಿಗೆ ವೇದಿಕೆ ಆಗಲಿದೆ ಎಂದರು.
ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ರಮೇಶ್ ಚಂದ್ರ ಲಹೋಟೆ ಅಧ್ಯಕ್ಷರು ಎಫ್ ಕೆಸಿಸಿ, ಧಾಮೋದರ್, ಪಂಕಜ್ ಕೊರಾಠಿ, ಪಿಸಿ ರಾವ್ ಅಧ್ಯಕ್ಷರು ಬಿಬಿಎಚ್ಎ ಮುಂತಾದವರು ಉಪಸ್ಥಿತರಿದ್ದರು.
Post a comment
Log in to write reviews