ಹಲವರಿಗೆ ಟೀ ಕುಡಿಯದೇ ದಿನ ಶುರುವಾಗುವುದಿಲ್ಲ, ಗ್ರೀನ್ ಟೀ ಅಥವಾ ಲೆಮನ್ ಟೀಯನ್ನಾದರು ಕುಡಿದು ದಿನಚರಿಯನ್ನು ಪ್ರಾರಂಭಿಸುವ ಅಭ್ಯಾಸ ಹಲವು ಮಂದಿಗೆ ಇದೆ.
ಅನೇಕ ಜನರು ಮನೆಯಲ್ಲಿ ಟೀ ಮಾಡುವಾಗ ಮೊದಲಿಗೆ ನೀರು ಮತ್ತು ಟೀ ಪುಡಿ ಹಾಕಿ ಕುದಿಸಿದರೆ, ಕೆಲವು ಜನರು ಹಾಲಿಗೆ ಟೀ ಎಲೆಯನ್ನು ಹಾಕಿ ತುಂಬಾ ಹೊತ್ತು ಕುದಿಸುತ್ತಾರೆ. ಇದರಿಂದ ರುಚಿ ಹೆಚ್ಚಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಅದು ತಪ್ಪು. ಹಾಲನ್ನು ಹೆಚ್ಚು ಕಾಯಿಸುವುದು ಅಪಾಯಕಾರಿ. ಆರೋಗ್ಯ ತಜ್ಞರು ಹೇಳುವಂತೆ ಹಾಲಿನೊಂದಿಗೆ ಟೀ ಅನ್ನು ದೀರ್ಘಕಾಲ ಕುದಿಸುವುದು ಅಥವಾ ಪದೇ ಪದೇ ಬಿಸಿ ಮಾಡುವುದು ಒಳ್ಳೆಯದಲ್ಲ.
ಟೀ ಸೇವನೆಯಿಂದ ಮೆದುಳು ಉತ್ತೇಜನಗೊಳ್ಳುತ್ತದೆ. ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಮತ್ತು ರಕ್ತದ ಸಕ್ಕರೆ ಮಟ್ಟ ಕೂಡ ನಿಯಂತ್ರಣದಲ್ಲಿರುತ್ತದೆ. ಆದರೆ, ತಜ್ಞರ ಪ್ರಕಾರ, ದೀರ್ಘಕಾಲ ಟೀ ಅನ್ನು ಕುದಿಸುವುದು ಒಳ್ಳೆಯದಲ್ಲ. ಕಾರಣ ಟೀ ಟ್ಯಾನ್ನಿನ್ಸ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ವೈನ್‌ಗಳಲ್ಲಿ ಕಂಡುಬರುವ ಪಾಲಿಫಿನಾಲಿಕ್ ಜೈವಿಕ ಅಣುಗಳನ್ನು ಸಹ ಒಳಗೊಂಡಿದೆ.
ನಮ್ಮ ದೇಹಕ್ಕೆ ಪ್ರೋಟೀನ್, ಖನಿಜಗಳು, ಸೆಲ್ಯುಲೋಸ್, ಕಾರ್ಬೋಹೈಡ್ರೇಟ್ಗಳು ಅವಶ್ಯವಾಗಿವೆ. ಚಹಾವನ್ನು ಹೆಚ್ಚು ಹೊತ್ತು ಕುದಿಸಿ ಕುಡಿಯುವುದರಿಂದ ಇವು ನಾಶವಾಗುತ್ತವೆ. ಹಾಲಿನೊಂದಿಗೆ ತಯಾರಿಸಿದ ಚಹಾವನ್ನು 4-5 ನಿಮಿಷಗಳಿಗಿಂತ ಹೆಚ್ಚು ಕಾಲ ಬಿಸಿ ಮಾಡುವುದರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ದೀರ್ಘಕಾಲ ಚಹಾ ಕುದಿಸುವುದರಿಂದ ಇದರಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ ಟೀ ಪ್ರಿಯರೆ ಟೀ ಬಗ್ಗೆ ಎಚ್ಚರ ವಿರಲಿ.
Post a comment
Log in to write reviews