ಥೈರಾಯ್ಡ್ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಪುರುಷರಿಗಿಂತ ಮಹಿಳೆಯರಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಮೇ.25ರಂದು ವಿಶ್ವ ಥೈರಾಯ್ಡ್ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ತಜ್ಞರು ಥೈರಾಯ್ಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಭಾರತದಲ್ಲಿ ಶೇ.70%ರಷ್ಟು ಕುಟುಂಬಗಳು ಅಯೋಡಿನ್ ರಹಿತ ಉಪ್ಪನ್ನು ಸೇವನೆ ಮಾಡುತ್ತಿದ್ದು, ಅಯೋಡಿನ್ ಕೊರತೆ ಹೈಪೋಥೈರಾಯ್ಡಿಸಮ್ ಕಾರಣವಾಗುತ್ತಿದೆ.
ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವವರಿಗೆ ಆಗಾಗ್ಗೆ ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಫೈಬರ್ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವಂತ ಸಲಹೆ ನೀಡಲಾಗುತ್ತದೆ. ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು, ಬೆಣ್ಣೆಹಣ್ಣು, ಡ್ರೈಫ್ರೂಟ್ಸ್, ಮೀನು, ಮೊಟ್ಟೆ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಎಲೆಕೋಸು, ಗಡ್ಡೆ ಕೋಸು ಮತ್ತು ಹೂಕೋಸುಗಳಂತಹ ತರಕಾರಿಗಳ ಸೇವನೆಯನ್ನು ನಿಯಂತ್ರಿಸಬೇಕು. ಹೈಪೋಥೈರಾಯ್ಡಿಸಮ್ ಗೆ ಚಿಕಿತ್ಸೆ ಪಡೆಯುತ್ತಿರುವವರು ಈ ತರಕಾರಿ ಸೇವನೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Post a comment
Log in to write reviews