Samayanews.

Samayanews.

2024-12-24 12:29:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹೆಚ್ಚಿದ ಚರ್ಮ ಸಮಸ್ಯೆಗಳಿಗೆ ತಜ್ಞ ವೈದ್ಯರು ನೀಡಿದ ಸಲಹೆ ಇಲ್ಲಿದೆ

ಒಂದೆಡೆ ಬೆಂಗಳೂರು ನಗರವಾಸಿಗಳನ್ನು ಡೆಂಗ್ಯೂ ಹಿಂಡಿಹಿಪ್ಪೆ ಮಾಡಿದೆ. ಇದರ ಜತೆಗೆ ಇದೀಗ ನಿಫಾ, ಮಂಕಿಪಾಕ್ಸ್ ಭೀತಿಯೂ ಎದುರಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ನಗರದ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಚರ್ಮ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿದ್ದು, ಎಚ್ಚರಿಕೆ ವಹಿಸುವಂತೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಡೆಂಗ್ಯೂ, ನಿಫಾ, ಮಂಕಿಪಾಕ್ಸ್ ಇತ್ಯಾದಿ ಸೋಂಕುಗಳ ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ. ಹಗಲು ವೇಳೆ ಅತಿಯಾದ ಬಿಸಿಲು, ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಚಳಿಯ ವಾತಾವರಣ, ಒಣ ಹವೆಯ ಕಾರಣ ನಗರದಲ್ಲಿ ಚರ್ಮ ಸಂಬಂಧಿತ ರೋಗಗಳು ಮತ್ತು ಸಮಸ್ಯೆಗಳು ಹೆಚ್ಚಾಗಿರುವುದನ್ನು ಚರ್ಮರೋಗ ತಜ್ಞರು ಗಮನಿಸಿದ್ದಾರೆ.

ಅತಿಯಾದ ಶಾಖದ ವಾತಾವರಣವು ಫಂಗಲ್ ಸೋಂಕುಗಳು ಮತ್ತು ದದ್ದುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಔಷಧಿಗಳ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಚರ್ಮ ಸಮಸ್ಯೆ: ಏನು ಮಾಡಬಾರದು?

ಸೋಪ್ ಮತ್ತು ಸ್ಕ್ರಬ್‌ಗಳನ್ನು ಅತಿಯಾಗಿ ಬಳಸುವುದು ಮತ್ತು ಟ್ರೆಂಡಿ ಆನ್‌ಲೈನ್ ಸ್ಕಿನ್ ಕೇರ್​​ಗಳನ್ನು ಹೆಚ್ಚಾಗಿ ಉಪಯೋಗಿಸುವುದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಚರ್ಮರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಚರ್ಮರೋಗ ತಜ್ಞರು ನೀಡಿರುವ ಸಲಹೆಗಳೇನು?

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ ಹೆಚ್ಚಾಗುತ್ತಿದ್ದಂತೆಯೇ ಚರ್ಮ ಸಂಬಂಧಿತ ಸಮಸ್ಯೆ ಹೆಚ್ಚಾಗಿರುವುದನ್ನು ಗಮನಿಸಿರುವುದಾಗಿ ಹಿರಿಯ ಚರ್ಮರೋಗ ತಜ್ಞೆರು ತಿಳಿಸಿರುವ ಹಾಗೆ ಶುಷ್ಕ ವಾತಾವರಣದಿಂದಾಗಿ ನಿವಾಸಿಗಳು ಒಣ ಚರ್ಮ, ದದ್ದುಗಳು, ತುರಿಕೆ ಮತ್ತಿತರ ಸಮಸ್ಯೆಗಳನ್ನು ಕಾಣುತ್ತಿದ್ದಾರೆ. ಬಿಸಿ ಶವರ್​​ನ ಅತಿಯಾದ ಬಳಕೆ ಕೂಡ ಈ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಹೀಗಾಗಿ ಮೈಲ್ಡ್ ಶವರ್ ಜೆಲ್‌ಗಳನ್ನು ಬಳಸುವುದು ಮತ್ತು ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಮಾಯಿಶ್ಚರೈಸ್​ಗಳನ್ನು ಬಳಸಿ ತೇವಗೊಳಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.

ಸೆರಮೈಡ್-ಆಧಾರಿತ ಮಾಯಿಶ್ಚರೈಸರ್‌ಗಳನ್ನು ಹೆಚ್ಚಾಗಿ ಶಿಫಾರಸ್ಸು ಮಾಡಲಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ರೋಗಲಕ್ಷಣಗಳನ್ನು ಕಡಿಮೆ ಮಾಡಲು ವೈದ್ಯರು ಆಂಟಿಹಿಸ್ಟಮೈನ್‌ಗಳು ಅಥವಾ ಅಲರ್ಜಿಯ ಔಷಧಿಗಳನ್ನು ಶಿಫಾರಸ್ಸು ಮಾಡಬಹುದು.

ಧರಿಸುವ ಬಟ್ಟೆಯ ಆಯ್ಕೆ ಬಗ್ಗೆಯೂ ಇರಲಿ ಎಚ್ಚರ

ಪಟಾಕಿಗಳಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ಚಳಿಗಾಲದ ಸಂದರ್ಭದಲ್ಲಿ ಉಂಟಾಗುವ ಹೆಚ್ಚಿನ ಮಾಲಿನ್ಯ ಕೂಡ ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜನರು ಬಿಗಿಯಾದ, ದಪ್ಪದ ಬಟ್ಟೆಗಳನ್ನು ಧರಿಸುವುದು ಸೋಂಕುಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎಂದು ಮತ್ತೊಬ್ಬ ಚರ್ಮರೋಗ ತಜ್ಞ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.


img
Author

Post a comment

No Reviews