ಮಳೆಗಾಲ ಅಂದರೆ ಎಲ್ಲರಿಗು ಒಂಥರಾ ಖುಷಿ. ಆದರೆ, ಮೇಕಪ್ ಮಾಡಿಕೊಂಡು ಹೊರಗಡೆ ಕಾಲಿಡುವಷ್ಟರಲ್ಲಿ ಕಾಡೋ ಮಳೆ ಬೇಸರ ಮೂಡಿಸುತ್ತದೆ. ಮಳೆಗಾಲದಲ್ಲಿ ಒದ್ದೆಯಾದ ಅಥವಾ ಆದ್ರತೆ ಇದ್ದರೆ ಚರ್ಮ ಸುಕ್ಕುಗಟ್ಟುತ್ತದೆ. ಕಲುಷಿತ ವಾತಾವರಣ, ವಿಷಕಾರಿ ಅಲ್ಟ್ರಾ ವಯಲೆಟ್ ಕಿರಣಗಳಿಂದ ಚರ್ಮಕ್ಕೆ ಹಾನಿಯುಂಟಾಗುತ್ತದೆ. ಸೌಂದರ್ಯ ಎಂದಾಕ್ಷಣ ಅದರ ರಕ್ಷಣೆ ಮಾಡಬೇಕಾದುದು ಕೇವಲ ಬಾಹ್ಯವಾಗಿ ಮಾತ್ರವಲ್ಲ. ತೆಗೆದುಕೊಳ್ಳುವ ಆಹಾರ, ಡಯಟ್ ಕ್ರಮದಲ್ಲಿಯೂ ಸರಿಯಾದ ಆಹಾರ ಕ್ರಮವನ್ನು ರೂಢಿಸಿಕೊಳ್ಳುವುದು ಅತಿ ಅಗತ್ಯ. ಮಳೆಗಾಲದಲ್ಲಿ ತೇವಾಂಶ ಹೆಚ್ಚು ಇರುವುದರಿಂದ ಚರ್ಮದಲ್ಲಿ ಜಿಡ್ಡಿನಂಶ ಹೆಚ್ಚುತ್ತದೆ. ಚರ್ಮವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡರೆ ಸಾಕು. ಮಳೆಗಾಲದಲ್ಲಿಯೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ತ್ವಚೆ ಆರೈಕೆ
ಎಣ್ಣೆಯ ಚರ್ಮ ನಿಮ್ಮದಾಗಿದ್ದರೆ ಸ್ನಾನದ ನಂತರ ಲೈಟ್‌ವೈಟ್ ಮಾಯಿಶ್ಚರೈಸರ್‌ನ್ನು ಬಳಸುವುದು ಒಳ್ಳೆಯದು. ವಾರಕ್ಕೆರಡು ಬಾರಿ ಸ್ಕ್ರಬ್ಬರ್‌ನ್ನು ಬಳಕೆ ಮಾಡಿ, ಮುಖದಲ್ಲಿನ ಕೊಳೆಯನ್ನು ತೆಗೆಯಬಹುದು. ಚರ್ಮದ ತ್ವಚೆಯನ್ನು ಹೆಚ್ಚಿಸುವ ಕ್ಲೆನ್ಸರ್‌ಗಳನ್ನು ಬಳಸಿ. ಫಂಗಸ್ ನಿರೋಧಕ ಪೌಡರನ್ನು ಬಳಕೆ ಮಾಡಿ. ವಿಟಮಿನ್-ಸಿ ಇರುವ ಹಣ್ಣುಗಳನ್ನು ಹೆಚ್ಚಾಗಿ ಬಳಸಿ. ವಿಟಮಿನ್-ಸಿಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಸ್ವಾಭಾವಿಕವಾಗಿ ಸಿಗುವಂತಹ ಮಾಯಿಶ್ಚರೈಸಿಂಗ್ ವಸ್ತುಗಳನ್ನೇ ಬಳಕೆ ಮಾಡಿ.ಒಣ ಚರ್ಮ ಇರುವವರು ಬಾದಾಮಿ ಪೇಸ್ಟ್ ಅಥವಾ ಜೇನನ್ನು ಕ್ಲೆನ್ಸರ್‌ನ್ನಾಗಿ ಮಾಡಿಕೊಳ್ಳಬಹುದು. ಅದರಿಂದ 5-7 ನಿಮಿಷ ಮಸಾಜ್ ಮಾಡಿ. ಇದರಿಂದ ಮುಖ ಒಣಗಿದಂತೆ ಕಾಣುವುದಿಲ್ಲ. ಎಣ್ಣೆ ಚರ್ಮದವರು ಸೌತೆಕಾಯಿ ರಸಕ್ಕೆ ರೋಸ್ ವಾಟರ್‌ನ್ನು ಮಿಶ್ರಣ ಮಾಡಿ ಟೋನರ್ ಆಗಿ ಬಳಸಿಕೊಳ್ಳಬಹುದು. ಸೇಬು ಹಣ್ಣಿನ ಪೇಸ್ಟ್‌ಗೆ ಒಂದು ಚಮಚ ಜೇನು ಮಿಶ್ರಣ ಮಾಡಿ ಮಾಸ್ಕ್‌ನಂತೆ ಹಂಚಿಕೊಳ್ಳಬಹುದು. ಇರುವವರು ಸೌಮ್ಯವಾದ ಕ್ಲೆನ್ಸರ್‌ನ್ನು ಬಳಕೆ ಮಾಡುವುದೊಳ್ಳೆಯದು. ಇದರಿಂದ ಸತ್ತ ಚರ್ಮದ ಕೋಶಗಳು ಹೊರಹೋಗುತ್ತವೆ. ಓಟ್ ಅನ್ನು ಸ್ಕ್ರಬ್ ಆಗಿ ಬಳಸಿಕೊಳ್ಳಬಹುದು. ಸ್ಕಿನ್ ಟೋನಿಂಗ್ ಮಾಡಿಸಿಕೊಳ್ಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಮಳೆಗಾಲದಲ್ಲಿ ರಾತ್ರಿ ಹೊತ್ತು ಸ್ಕಿನ್ ಟೋನಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು.
ಮೇಕಪ್‌ಗೂ ಮುನ್ನ
ಮಳೆಗಾಲದಲ್ಲಿ ಮೇಕಪ್‌ಗೆ ಫೌಂಡೇಶನ್‌ನ್ನು ಬಳಸಿಕೊಳ್ಳುವುದಕ್ಕಿಂತ ಫೇಸ್ ಪೌಡರ್‌ನ್ನು ಬಳಕೆ ಮಾಡುವುದು ಒಳ್ಳೆಯದು. ಮಸ್ಕರಾ ಮತ್ತು ಐ ಲೈನರ್, ಐ ಶಾಡೋಗಳನ್ನು ಬಳಸುವಾಗ ವಾಟರ್‌ಪ್ರೂಫ್ ಉತ್ಪನ್ನಗಳನ್ನೇ ಬಳಸಿ. ಐ ಬ್ರೋಗಳಿಗೆ ಹೇರ್‌ಜೆಲ್ ಉಪಯೋಗಿಸಿಕೊಂಡು ನಂತರ ಐಬ್ರೋ ಪೆನ್ಸಿಲ್‌ನಿಂದ ತೀಡಿಕೊಳ್ಳಿ.
ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ತಲೆಕೂದಲು ಕಳೆಗುಂದಿದಂತೆ ಕಾಣುತ್ತದೆ. ತಲೆಕೂದಲಿಗೆ ಮೈಲ್ಡ್ ಶಾಂಪೂವನ್ನು ಬಳಸಿ. ಹೇರ್ ಕಂಡೀಶನರ್‌ನ್ನು ಬಳಸಿ. ಸಾಕಷ್ಟು ನೀರು ಕುಡಿಯಿರಿ. ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ. ಅತಿಯಾದ ಡಯಟ್ ಬೇಡ.
ವಾರಕ್ಕೆರಡು ಬಾರಿ ಫೇಸ್ ಸ್ಕ್ರಬ್ ಬಳಸಿ. ಹೆವೀ ಮಾಯಿಶ್ಚರೈಸಿಂಗ್ ಕ್ರೀಮ್, ಎಣ್ಣೆ ಅಂಶ ಇರುವ ಫೌಂಡೇಶನನ್ನು ಬಳಸಿದಿರಿ. - ಚರ್ಮದ ಹೊಳಪು ಹೆಚ್ಚಿಸುವಂತಹ ಸ್ಕಿನ್ ಟೋನರ್‌ನ್ನೆ ಬಳಸಿ.
Post a comment
Log in to write reviews