ಮೊದಲು ಒಂದು ಬೌಲ್ ನಲ್ಲಿ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಇದಕ್ಕೆ ಕೆಲವು ಹನಿ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ. ನಂತರ ಈ ಮಿಶ್ರಣಕ್ಕೆ ಒಂದು ಚಮಚ ಮೊಸರು ಅಥವಾ ಸೌತೆಕಾಯಿ ರಸವನ್ನು ಸೇರಿಸಿ ಮತ್ತು ಇಡೀ ಮಿಶ್ರಣವನ್ನು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಮೊದಲು ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಇಲ್ಲದಿದ್ದರೆ, ನಿಮ್ಮ ಚರ್ಮವನ್ನು ಕ್ಲೆನ್ಸರ್‌ನಿಂದ ತೊಳೆಯಿರಿ. ಸಿದ್ಧಪಡಿಸಿದ ಫೇಸ್ ಪ್ಯಾಕ್ ಅನ್ನು ಬೆರಳುಗಳು ಅಥವಾ ಬ್ರಷ್ ಸಹಾಯದಿಂದ ಮುಖದ ಮೇಲೆ ಸಮವಾಗಿ ಹಚ್ಚಿರಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ 15 ರಿಂದ 20 ನಿಮಿಷಗಳ ಕಾಲ ಹಾಗೇ ಇರಿಸಿ. ನಂತರ ನಿಮ್ಮ ಮುಖವನ್ನು ತೊಳೆಯಿರಿ. ಮೃದುವಾದ ಟವೆಲ್‌ನಿಂದ ನಿಮ್ಮ ಮುಖವನ್ನು ಒರೆಸಿಕೊಳ್ಳಿ. ಅಂತಿಮವಾಗಿ, ನಿಮ್ಮ ನೆಚ್ಚಿನ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಬಹುದು .
ಈ ಫೇಸ್ ಪ್ಯಾಕ್ ನಲ್ಲಿ ಚರ್ಮವನ್ನು ಶಮನಗೊಳಿಸವ ಮತ್ತು ಆರ್ಧ್ರಕಗೊಳಿಸವ ಪದಾರ್ಥಗಳಿದ್ದು ಇದು ನಮ್ಮ ತ್ವಚೆಯನ್ನು ಮೃದುಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಉಪಯುಕ್ತವಾಗಿದೆ.
Post a comment
Log in to write reviews