ಉಪಯುಕ್ತ ಮಾಹಿತಿ
ಪ್ರಾಯೋಗಿಕವಾಗಿ ದಕ್ಷಿಣ ಕನ್ನಡದಲ್ಲಿ ಸಿಡಿಲು ನಿರೋಧಕ ಯಂತ್ರಗಳ ಅಳವಡಿಕೆ : ಸಚಿವ ದಿನೇಶ್ ಗುಂಡೂರಾವ್
ಕಳೆದ ಕೆಲ ವರ್ಷಗಳಲ್ಲಿ ಪುತ್ತೂರು, ಸುಳ್ಯ , ಸುಬ್ರಹ್ಮಣ್ಯ ಮೊದಲಾದ ಪ್ರದೇಶಗಳಲ್ಲಿ ಸಿಡಿಲು ಬಡಿದು ಆರೇಳು ಮಂದಿಯ ಸಾವು ಸಂಭವಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸಿಡಿಲಾಘಾತದ ನಿಯಂತ್ರಣಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪರಿಸರಗಳಲ್ಲಿ ನಾಲ್ಕರಿಂದ ಆರು ಕಡೆಗಳಲ್ಲಿ ಸಿಡಿಲು ನಿರೋಧಕ ಅಳವಡಿಕೆ ಕ್ರಮ ವಹಿಸಲಾಗಿದೆ.
ಒಂದು ಕಡೆ ಸಿಡಿಲು ನಿರೋಧಕ ಅಳವಡಿಸಿದ್ದಲ್ಲಿ 500 ಮೀಟರ್ನಿಂದ 1.50 ಕಿ.ಮೀ. ವ್ಯಾಪ್ತಿಯಲ್ಲಿ ಸಿಡಿಲಾಘಾತವನ್ನು ತಪ್ಪಿಸಲು ಸಾಧ್ಯವಿದೆ. ಇದರಿಂದ ಸಿಡಿಲಿನಿಂದ ಉಂಟಾಗುವ ಪ್ರಕೃತಿ ವಿಕೋಪಗಳನ್ನು ತಪ್ಪಿಸಬಹುದು. ಮನುಷ್ಯರ ಮತ್ತು ಜಾನುವಾರುಗಳ ಜೀವವನ್ನು ಕೂಡ ಕಾಪಾಡಬಹುದು ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ಸಿಡಿಲು ನಿರೋಧಕ ಅಳವಡಿಸಲಾಗಿದೆ.ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Post a comment
Log in to write reviews