ಹೆಣ್ಣೆಂದರೆನೇ ಸೌಂದರ್ಯ. ಅಂದದ ಗಣಿಯವಳು. ಅಂತಹ ಹೆಣ್ಣಿನ ಅಂದವನ್ನ ಇಮ್ಮಡಿಗೊಳಿಸುವ ಶಕ್ತಿ ಅವಳ ಅದರ(ತುಟಿ)ದಲ್ಲಿ ಅಡಗಿದೆ. ಇಂತಹ ತುಟಿಗಳಿಗೆ ಬಣ್ಣ ಹಚ್ಚಿದರೆ ಅಹಾಃ ಅದನ್ನು ನೋಡುವುದರಲ್ಲಿ ಎಂತಹವರಾದರೂ ಮೈಮರೆಯುತ್ತಾರೆ.
ಅದಕ್ಕಾಗಿಯೆ ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಲಿಪ್ ಸ್ಟಿಕ್ ಲಭ್ಯವಿದ್ದು ಅವುಗಳ ಖರೀದಿಗೆ ಮಹಿಳೆಯರು ಸದಾ ಮುಂಚೂಣಿಯಲ್ಲಿರುತ್ತಾರೆ. ಲಿಪ್ ಸ್ಟಿಕ್ ಗಳ ತಯಾರಿಕ ಕಂಪನಿಗಳು ಬಣ್ಣ ಮತ್ತು ಸುವಾಸನೆ ನೀಡುವ ದೃಷ್ಟಿಯಿಂದ ಅನೇಕ ರಾಸಾಯನಿಕಗಳನ್ನು ಬಳಕೆ ಮಾಡುತ್ತವೆ .
ಲಿಪ್ ಸ್ಟಿಕ್ ಅನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ತುಟಿಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದರ ಜೊತೆಗೆ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ ಎನ್ನುತ್ತದೆ ಅಧ್ಯಯನ. ಅದಕ್ಕಾಗಿ ಉತ್ತಮ ಗುಣಮಟ್ಟದ ಲಿಪ್ ಸ್ಟಿಕ್ ಬಳಕೆ ಮಾಡುವುದು ಉತ್ತಮ .
ಗುಣಮಟ್ಟದ ಲಿಪ್ ಸ್ಟಿಕ್ ಗಳು ಯಾವಾಗಲು ಸ್ವಲ್ಪ ದುಬಾರಿಯಾಗಿರುತ್ತದೆ. ಆದ ಕಾರಣ ಸಾಮಾನ್ಯ ವರ್ಗದ ಮಹಿಳೆಯರು ಖರೀದಿಸಲು ಸಾಧ್ಯವಾಗದೆ ಅಗ್ಗದ ಮತ್ತು ನಕಲಿ ಲಿಪ್ ಸ್ಟಿಕ್ ಖರೀದಿಗೆ ಮುಂದಾಗುತ್ತಾರೆ. ಇದರಿಂದಾಗಿ ತುಟಿಯ ಬಣ್ಣ ಕಳೆಗುಂದುತ್ತವೆ. ಅಷ್ಟೆ ಅಲ್ಲದೆ ತುಟಿಗಳು ಒಣಗುವುದು, ಕಪ್ಪಾಗುವುದು ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ.
ಹೀಗಾಗಿ ಮನೆಯಲ್ಲಿಯೇ ರಾಸಾಯನಿಕ (ಕೆಮಿಕಲ್ ) ರಹಿತವಾಗಿ ಲಿಪ್ ಸ್ಟಿಕ್ ತಯಾರಿಸುವ ಮೂಲಕ ನಿಮ್ಮ ಸೌಂದಯ೯ದ ಜೊತೆಗೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ತುಟಿಗಳಿಗೆ ವಿಭಿನ್ನ ಹಾಗೂ ಬಣ್ಣದ ಲಿಪ್ ಸ್ಟಿಕ್ ತಯಾರಿಸ ಬಹುದು. ಇದರಿಂದಾಗಿ ಹಣ ಕೂಡ ಉಳಿತಾಯವಾಗುತ್ತದೆ.
ಹಾಗಾದರೆ ಮನೆಯಲ್ಲಿಯೆ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿಕೊಂಡು ಕೆಮಿಕಲ್ ರಹಿತ ಲಿಪ್ ಸ್ಟಿಕ್ ತಯಾರಿಸುವುದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ನಿಮಗಾಗಿ ನಮ್ಮ ವಾಹಿನಿ ಪ್ರಸ್ತುತ ಪಡಿಸುತ್ತಿದೆ
ಲಿಪ್ ಸ್ಟಿಕ್ ತಯಾರಿಕೆಗೆ ಬೇಕಾದ ಮೂಲ ಸಾಮಾಗ್ರಿಗಳು
ಬೆಣ್ಣೆ
ಜೇನುಮೇಣ
ತೆಂಗಿನ ಏಣ್ಣೆ, ಆಲಿವ್ ಅಥವಾ ಬಾದಾಮಿ ಎಣ್ಣೆ
ಕಂಟೇನರ್(ಲಿಪ್ ಸ್ಟಿಕ್ ಶೇಖರಿಸುವ ಡಬ್ಬಿ)
ಕ್ಯಾರೇಟ್, ಬೀಟ್ರೂಟ್, ದಾಲ್ಚಿನ್ನಿ ಕೋಕ್ ಪೌಡರ್ ( ಬಣ್ಣಕ್ಕನುಗುಣವಾಗಿ ಯಾವುದಾದರು ಒಂದು)
ವಿವಿಧ ಬಣ್ಣದ ಲಿಪ್ ಸ್ಟಿಕ್ ಮಾಡುವ ವಿಧಾನ
ಕೆಂಪು ಬಣ್ಣದ ಲಿಪ್ ಸ್ಟಿಕ್
ಹಂತ 1 - ಒಂದು ಬಟ್ಟಲಿನಲ್ಲಿ ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಅಥವ ಬಾದಾಮಿ ಏಣ್ಣೆ,ಬೆಣ್ಣೆ ಮತ್ತು ಜೇನುಮೇಣವನ್ನು ಕರಗಿಸಿ ಮತ್ತು ಮಿಶ್ರಣ ಮಾಡಿ.
ಹಂತ 2 - ಈ ಮಿಶ್ರಣಕ್ಕೆ ಬೀಟ್ರೂಟ್ ಪೌಡರ್ ಸೇರಿಸಿ.
ಹಂತ 3 - ಮಿಶ್ರಣವನ್ನು ಕಂಟೇನರ್ ನಲ್ಲಿ ಸುರಿಯಿರಿ ಮತ್ತು ಅದನ್ನ ಫ್ರಿಜ್ಡ್ನಲ್ಲಿ ಇಡಿ.
ಕೆಂಗಂದು ಬಣ್ಣದ ಲಿಪ್ ಸ್ಟಿಕ್
ಹಂತ 1 - ಒಂದು ಬಟ್ಟಲಿನಲ್ಲಿ ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಅಥವ ಬಾದಾಮಿ ಏಣ್ಣೆ,ಬೆಣ್ಣೆ ಮತ್ತು ಜೇನುಮೇಣವನ್ನು ಕರಗಿಸಿ ಮತ್ತು ಮಿಶ್ರಣ ಮಾಡಿ.
ಹಂತ 2 - ಈ ಮಿಶ್ರಣಕ್ಕೆ ದಾಲ್ಚಿನ್ನಿ ಪುಡಿ ಸೇರಿಸಿ.
ಹಂತ 3 – ತಯಾರಾದ ಮಿಶ್ರಣವನ್ನು ಕಂಟೇನರ್ ನಲ್ಲಿ ಸುರಿಯಿರಿ ಮತ್ತು ಅದನ್ನ ಫ್ರಿಜ್ಡ್ನಲ್ಲಿಡಿ.
ಕಡುಕಂದು ಬಣ್ಣದ ಲಿಪ್ ಸ್ಟಿಕ್
ಹಂತ 1 - ಒಂದು ಬಟ್ಟಲಿನಲ್ಲಿ ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಅಥವ ಬಾದಾಮಿ ಏಣ್ಣೆ,ಬೆಣ್ಣೆ ಮತ್ತು ಜೇನುಮೇಣವನ್ನು ಕರಗಿಸಿ ಮತ್ತು ಮಿಶ್ರಣ ಮಾಡಿ.
ಹಂತ 2 - ಈ ಮಿಶ್ರಣಕ್ಕೆ ಕೋಕ್ ಪುಡಿ ಸೇರಿಸಿ.
ಹಂತ 3 – ತಯಾರಾದ ಮಿಶ್ರಣವನ್ನು ಕಂಟೇನರ್ ನಲ್ಲಿ ಸುರಿಯಿರಿ ಮತ್ತು ಅದನ್ನ ಪ್ರಿಜ್ಡ್ ನಲ್ಲಿ ಇಡಿ.
ಈ ರೀತಿಯ ತಯಾರಾದ ಪೇಸ್ಟ್ ಅನ್ನು ತಮ್ಮ ತುಟಿಗಳಿಗೆ ಹಚ್ಚುವ ಮೂಲಕ ನೈಸರ್ಗಿಕವಾಗಿ ಕೆಮಿಕಲ್ ರಹಿತ ಲಿಪ್ ಸ್ಟಿಕ್ ಮನೆಯಲ್ಲೇ ಸಿದ್ದಪಡಿಸಬಹುದಾಗಿದೆ.
ವಿನುತಾ ಹೆಚ್.ಎಲ್ ಡಿಜಿಟಲ್ ಸಮಯ ನ್ಯೂಸ್
Post a comment
Log in to write reviews