ಮಲೆನಾಡಿನ ಪ್ರಮುಖ ಪ್ರವಾಸಿ ತಾಣದಲ್ಲಿ ಮುಳ್ಳಯ್ಯನ ಗಿರಿಶಿಖರ ಸಹ ಒಂದು. ಅಲ್ಲಿರುವ ಮಂಜಿನ ವಾತಾವರಣ ಕೈ ಎತ್ತಿದರೆ ಕೈಗೆ ತಾಕುವ ಹಾಗೆ ಭಾಸವಾಗುವ ಬಾನ ಮೋಡಗಳು ಸೇರಿದಂತೆ ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋಗದವರೆ ಇಲ್ಲ. ಚಾರಣವನ್ನ ಇಷ್ಟಪಡುವವರು ಈ ಪ್ರದೇಶಕ್ಕೆ ಬಂದರೆ ಅವರಿಗೆ ನೆನಪಾಗುವುದು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞನ ವಚನ. ಇಂಥಹ ಪ್ರದೇಶಕ್ಕೆ ಒಮ್ಮೆಯಾದರೂ ಭೇಟಿ ಕೊಡಬೇಕೆನ್ನುವುದು ಎಷ್ಟೋ ಜನರ ಆಸೆ.
ಕರ್ನಾಟಕದ ಅತಿ ಎತ್ತರದ ಶಿಖರ
ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ಚಂದ್ರ ದ್ರೋಣ ಬೆಟ್ಟದ ಶ್ರೇಣಿಯಲ್ಲಿಲ್ಲಿರುವ ಮುಳ್ಳಯ್ಯನಗಿರಿ ಒಟ್ಟು 6316 ಅಡಿ ಎತ್ತರವಿದೆ. ಇದು ಕರ್ನಾಟಕದ ಅತಿ ಎತ್ತರದ ಶಿಖರವಾಗಿದ್ದು, ಪಶ್ಚಿಮ ಘಟ್ಟದಲ್ಲಿ 23 ನೇ ಅತಿ ಎತ್ತರದ ಶಿಖರವಾಗಿದೆ. ಮುಳ್ಳಯ್ಯನಗಿರಿಯ ಶಿಖರದಲ್ಲಿ ಒಂದು ಸಣ್ಣ ದೇವಾಲಯವಿದ್ದು, ಅಲ್ಲಿ ಪೊಲೀಸ್ ರೇಡಿಯೋ ಪ್ರಸಾರ ಕೇಂದ್ರವಿದೆ.
ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ಥಳ.
ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಈ ಸ್ಥಳಗಳಿಗೆ ಮಳೆಗಾಲದಲ್ಲಿ ಜನರು ಹೆಚ್ಚಾಗಿ ಭೇಟಿ ನೀಡಲು ಬಯಸುತ್ತಾರೆ. ಕಾರಣ ಮಳೆಗಾಲದಲ್ಲಿ ಅಲ್ಲಿನ ವಾತಾವರಣ ಕೊಡುವ ಅನುಭವವೇ ಬೇರೆ. ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಾಗದು. ಅದನ್ನು ಅನುಭವಿಸಿದವರಿಗೆ ಗೊತ್ತು ಅದು ಕೊಡುವ ಕಿಕ್. ಬೈಕ್ ಹಾಗೂ ಕಾರ್ ಗಳು ಚಲಿಸಲು ಮಾತ್ರ ಸಾಧ್ಯವಾಗುವ ಆ ಓಣಿಯಲ್ಲಿ ಹೋದರೆ ಹಚ್ಚ ಹಸಿರಿನ ಪ್ರಕೃತಿಯ ಮಡಿಲಿನಲ್ಲಿ ಪ್ರಯಾಣಿಸಿದ ಅನುಭವ ಸಿಗುವುದಂತು ಸತ್ಯ. ಟ್ರೆಕ್ಕಿಂಗ್ ಪ್ರಿಯರಿಗೆ ಇದೊಂದು ಬೆಸ್ಟ್ ಪ್ರವಾಸಿ ತಾಣವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಈ ಮಲೆನಾಡಿನ ಸ್ವರ್ಗ ಮುಳ್ಳಯ್ಯನ ಗಿರಿ ಶಿಖರಕ್ಕೆ ಹೋಗಬೇಕೆನ್ನುವುದು ಎಷ್ಟೋ ಜನರ ಆಸೆ. ಆದರೆ, ಕಾರಣಾಂತರದಿಂದ ಅದು ಸಾಧ್ಯವಾಗಿರುವುದಿಲ್ಲ. ಆದರೆ ಒಮ್ಮೆ ಈ ಪ್ರದೇಶಕ್ಕೆ ಭೇಟಿ ಕೊಟ್ಟು ನೋಡಿ. ಆ ವಾತಾವರಣ ಕೊಡುವ ಅನುಭವ ನೀವು ಜೀವನದಲ್ಲಿ ಮರೆಯುವುದಿಲ್ಲ.
Post a comment
Log in to write reviews