ವಯಸ್ಸು ಮುಂದುವರೆಯುತ್ತಿದ್ದಂತೆ ಮುಖದಲ್ಲಿ ನೆರಿಗೆಗಳು ಮೂಡುವುದು ಸಾಮಾನ್ಯ. ಇದಕ್ಕೆ ಪ್ರಮುಖ ಕಾರಣ ಬಿಸಿಲಿನ ಅತಿನೇರಳೆ ಕಿರಣಗಳು. ಈ ಕಿರಣಗಳ ಪ್ರಭಾವದಿಂದ ರಕ್ಷಿಸಿಕೊಳ್ಳಲು ಹಾಗೂ ಈಗಾಗಲೇ ಮೂಡಿರುವ ನೆರಿಗೆ ಗಳನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದು ಸರಳ ಹಾಗೂ ಸುಲಭವಾಗಿ ಲಭ್ಯವಿರುವ ಸಾಮಾಗ್ರಿಗಳಿಂದಲೇ ತಯಾರಾಗುತ್ತದೆ.
ಅದು ಹೇಗೆಂದರೆ ಎರಡು ಕ್ಯಾರೆಟ್‌ಗಳನ್ನು ಸಿಪ್ಪೆ ಸುಲಿದು ಮೆತ್ತಗಾಗುವವರೆಗೂ ಬೇಯಿಸಿ. ಇವನ್ನು ಒಂದು ತಟ್ಟೆಯ ಮೇಲೆ ಇರಿಸಿ ನುಣ್ಣಗಾಗುವಂತೆ ಕಿವುಚಿ. ನಂತರ ಒಂದು ಚಿಕ್ಕ ಚಮಚ ಬಾದಾಮಿ ತೈಲವನ್ನು ಹಾಕಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಒಂದು ಗಂಟೆಯವರೆಗೆ ಫ್ರಿಜ್ಜಿನಲ್ಲಿರಿಸಿ ಬಳಿಕ ಈ ಲೇಪವನ್ನು ತೊಚೆಗೆ ಧರಿಸಿ ಒಂದು ಗಂಟೆಯವರೆಗೂ ಹೀಗೇ ಇರಿಸಿ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.
ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಇದನ್ನು ಮೂರು ಬಾರಿ ಮುಖಕ್ಕೆ ಲೇಪನ ಮಾಡಿಕೊಳ್ಳಿ.
Post a comment
Log in to write reviews