ಉಪಯುಕ್ತ ಮಾಹಿತಿ
ರೈಲು ಟಿಕೆಟ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ, ಉಚಿತ ಸೇವೆಯನ್ನು ಪಡೀಬೋದು
ದೂರ ಪ್ರಯಾಣಕ್ಕೆ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವ ವಿಧಾನ ರೈಲು ಜರ್ನಿ. ಪ್ರತಿದಿನ ಕೋಟಿಗಟ್ಟಲೆ ಜನರು ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ಆದರೆ ರೈಲು ಟಿಕೆಟ್ ಕೇವಲ ಪ್ರಯಾಣ ಮಾಡೋದಕ್ಕೆ ಮಾತ್ರವಲ್ಲ. ಇದರ ಮೂಲಕವೂ ಕೆಲವು ಉಚಿತ ಸೇವೆಗಳನ್ನು ಪಡೆಯಬಹುದು.
ಭಾರತೀಯ ರೈಲ್ವೇ ತನ್ನ ಸಾಮಾನ್ಯ ಪ್ರಯಾಣಿಕರ ಸುರಕ್ಷತೆಗೆ ಎಲ್ಲಾ ರೀತಿಯ ಸೇವೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಅವರ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡುತ್ತದೆ.
ರೈಲ್ವೇ ಪ್ರಯಾಣಿಕರಿಗೆ ಉಚಿತ ಹೊದಿಕೆ, ದಿಂಬು, ಬೆಡ್ ಶೀಟ್ ಮತ್ತು ಹ್ಯಾಂಡ್ ಟವೆಲ್‌ನ್ನು ಒದಗಿಸುತ್ತದೆ. ಆದರೆ ಗರೀಬ್ ರಥ ಎಕ್ಸ್‌ಪ್ರೆಸ್‌ನಂತಹ ಕೆಲವು ರೈಲುಗಳಲ್ಲಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಅಲ್ಲದೆ ಟಿಕೆಟ್ ಇದ್ದರೆ ಪ್ರವಾಸದ ಸಮಯದಲ್ಲಿ ಅಥವಾ ಯಾವುದೇ ಪರಿಸ್ಥಿತಿಯ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡಲಾಗುತ್ತದೆ.
Post a comment
Log in to write reviews