ಶಿವಮೊಗ್ಗ: ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ತಂಬಾಕು ನಿಯಂತ್ರಣ ಕಾರ್ಯಕ್ರಮ ಸಲಹೆಗಾರ ಜಿ.ಕೆ.ರವಿರಾಜ್ ಹೇಳಿದರು.
ರೋಟರಿ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ, ಆರೋಗ್ಯ ಜಾಗೃತಿ ಮತ್ತು ವಿಶ್ವ ತಂಬಾಕುರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಸಿಗರೇಟ್, ಬಿಡಿ ತಂಬಾಕು ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತುಗಳಿದ್ದು, ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿದೆ. ತಂಬಾಕಿನಲ್ಲಿರುವ ರಾಸಾಯನಿಕ ಅಂಶ ಕ್ಯಾನ್ಸರ್ ತರಿಸುತ್ತಿದೆ. ತಂಬಾಕು ಸೇವನೆಯಿಂದ ಪ್ರತಿ ನಿತ್ಯ ಸಾವಿರಾರು ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ರೋಟರಿ ಶಿವಮೊಗ್ಗದ ಸತೀಶ್ ಚಂದ್ರ ಮಾತನಾಡಿ, ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜೀವನಶೈಲಿಯಲ್ಲಿ ಸಕರಾತ್ಮಕ ಅಂಶ ಅಳವಡಿಸಿಕೊಳ್ಳಬೇಕು. ತಂಬಾಕು ಸೇವನೆಯಿಂದ ದೂರವಿರಬೇಕು ಎಂದರು.
Post a comment
Log in to write reviews