ಪ್ರತಿಯೊಬ್ಬ ವ್ಯಕ್ತಿಗೂ ವಿಶೇಷ ಆಸಕ್ತಿ,ಹವ್ಯಾಸ ಇದ್ದೇ ಇರುತ್ತದೆ. ಅಂತಹ ಹವ್ಯಾಸಗಳಲ್ಲಿ ಚಾರಣ(ಟ್ರಕ್ಕಿಂಗ್) ಕೂಡ ಒಂದು. ಅದರಲ್ಲೂ ಇತ್ತಿಚ್ಚಿನ ಯುವಕರಲ್ಲಿ ಚಾರಣ ಹವ್ಯಾಸ ಹೆಚ್ಚಾಗಿ ಕಂಡುಬರುತ್ತಿದೆ. ಇದು ಒಂದು ಉತ್ತಮ ಹವ್ಯಾಸ ಎಂದೇ ಹೇಳಬಹುದು. ಕೆಲವರು ಎಂಜಾಯ್ ಮಾಡೋದಕ್ಕಾಗಿ ಟ್ರೆಕ್ಕಿಂಗ್‌ಗೆ ಹೋದರೆ ಇನ್ನು ಕೆಲವರು ಹವ್ಯಾಸಕ್ಕಾಗಿ ಟ್ರೆಕ್ಕಿಂಗ್ ಮಾಡುತ್ತಾರೆ. ಇನ್ನು ಕೆಲವರು ಕುತೂಹಲ ಹಾಗೂ ಸ್ಥಳವನ್ನ ಅನ್ವೇಷಣೆ ಮಾಡೋದಕ್ಕಾಗಿ ಚಾರಣ ಮಾಡುತ್ತಾರೆ. ಕೆಲವರಿಗಂತು ಚಾರಣ ಮಾಡುವುದು ಬಾಲ್ಯದ ಕನಸು ಎಂದೇ ಹೇಳಬಹುದು. ಅಂತಹ ಚಾರಣ ಪ್ರಿಯರಿಗಾಗಿ ಈ ಲೇಖನ
ಚಾರಣ ಎಂದರೆ?
ಚಾರಣ ಒಂದು ಹವ್ಯಾಸವಾಗಿದ್ದು ಬೆಟ್ಟ–ಗುಡ್ಡ ಹತ್ತುವುದು, ನದಿ ಪಾತ್ರಗಳಲ್ಲಿ ನಡೆಯುತ್ತ ಮುಂದೆ ಸಾಗುವುದು. ಕಾಡು-ಮೇಡುಗಳಲ್ಲಿ ಅಲೆದು ಅಲ್ಲೆ ತಂಗುವ ಮೂಲಕ ಒಂದು ಸುಂದರ ಅನುಭವ ಪಡೆಯುತ್ತ ಮುಂದೆ ಸಾಗುವುದಾಗುದಾಗಿದೆ. ಭೂರಮೆಯ ಸೌಂದರ್ಯವನ್ನ ಸವಿಯಲು ಚಾರಣ ಒಂದು ಉತ್ತಮ ವೇದಿಕೆ. ಚಾರಣವು ಧೈರ್ಯ, ಸಾಹಸ, ಆತ್ಮವಿಸ್ವಾಸ, ನಾಯಕತ್ವ, ಯೋಜನೆ ಸಂಘಟನೆ ಮುಂತಾದ ಗುಣವನ್ನ ಬೆಳೆಸಲು ತುಂಬ ಸಹಕಾರಿ .ಅಷೇ ಅಲ್ಲದೆ ಚಾರಣವು ಉತ್ತಮ ಆರೋಗ್ಯಕ್ಕೆ ಕಾರಂವಾಗುವ ಜೊತೆಗೆ ಪರ್ವತಾರೋಹಣದಂತಹ ಕ್ರೀಡಾಸಕ್ತಿ ಬೆಳೆಸಲು ತುಂಭಾನೇ ಸಹಕಾರಿಯಾಗಿದೆ.
ತಯಾರಿ ಹೀಗಿರಲಿ:
ಚಾರಣ ಮಾಡಬೇಕು ಎಂದರೆ ಅದಕ್ಕೆ ಸರಿಯಾದ ತಯಾರಿ ಇರಲೇ ಬೇಕು ಇಲ್ಲದೇ ಹೋದರೆ ಅಪಾಯ ಎದುರಿಸಬೇಕಾಗುತ್ತದೆ.
1) ಸ್ಥಳದ ಆಯ್ಕೆ ಮತ್ತು ಮಾಹಿತಿ ಕಲೆ
2) ಸ್ಥಳದ ದೂರ ಕ್ರಮಿಸುವ ಸಾಮರ್ಥ್ಯದ ಬಗ್ಗೆ ಅರಿವು.
3) ಆಹಾರ ಪದಾರ್ಥ ಮತ್ತು ಕುಡಿಯುವ ನೀರಿನ ಪೂರೈಕೆ.
ಚಾರಣ ಪ್ರಿಯರೇ ಟ್ರಕ್ಕಿಂಗ್ ಆರಂಭಿಸುವ ಮೊದಲು ನೀವು ಚಾರಣ ಹೊರಡಬೇಕೆಂದುಕೊಂಡ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕಿ. ನೀವು ಹೊರಡುವ ಸ್ಥಳ ಮತ್ತು ಚಾರಣ ಹೊರಡಬೇಕೆಂದು ಕೋಂಡಿರುವ ಸ್ಥಳದ ನಡುವಿನ ದೂರದ ಲೆಕ್ಕಾಚಾರ ಮಾಡಿ ನಿಮ್ಮ ಕ್ರಮಿಸುವ ಸಾಮರ್ಥ್ಯ ಬಗ್ಗೆ ತಿಳಿದುಕೊಳ್ಳಿ. ನಂತರ ಚಾರಣದ ವೇಳೆ ಬೇಕಾಗುವ ಆಹಾರ ಪದಾರ್ಥ ಹಾಗೂ ನೀರನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗಿ. ಚಾರಣದದಲ್ಲಿ ಕಾಡಿನ ಮಧ್ಯೆ ಸಾಗಬೇಕಾಗುವುದರಿಂದ ಅಹಾರ ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಬಹುದು ಅದರಿಂದಾಗಿ ಚಾರಣಕ್ಕೆ ಹೊರಡುವ ಮುನ್ನ ಜೊತೆಯಲ್ಲಿ ನಿಮಗೆ ಅಗತ್ಯ ವಿರುವ ಆಹಾರ ಪದಾರ್ಥ ಮತ್ತು ಕುಡಿಯುವ ನೀರನ್ನು ಜೊತೆಯಲ್ಲಿ ಕೊಂಡೊಯ್ಯಿರಿ. ಮಾರ್ಗ ಮಧ್ಯೆ ಸಾಗುವಾಗ ಅಲ್ಲೆ ತಂಗಬೇಕಾಗುವುದರಿಂದ ತಂಗಲು ಅಗತ್ಯ ಬೇಕಾದ ಅಗತ್ಯ ಸಲಕರಣೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
ದಕ್ಷಿಣ ಭಾರತದ ಚಾರಣ ಸ್ಥಳಗಳು:
ಸಾಮಾನ್ಯವಾಗಿ ಚಾರಣಿಗರಲ್ಲಿ ಉತ್ತರ ಭಾಗಕ್ಕೆ ಚಾರಣ ಹೊರಡುವರೆ ಹೆಚ್ಚು. ಉತ್ತರ ಭಾರತದಷ್ಟೇ ಉತ್ತಮ ಚಾರಣ ಸ್ಥಳಗಳು ದಕ್ಷಿಣ ಭಾರತದಲ್ಲು ಕೂಡ ಹೆಚ್ಚಾಗಿಯೆ ಇವೆ. ದಕ್ಷಿಣ ಭಾರತವು ಚಾರಣಕ್ಕೆ ಒಂದು ಉತ್ತಮ ಆಯ್ಕೆ ಎಂದೇ ಹೇಳಬಹುದು. ಅಂತಹ ಉತ್ತಮ ಸ್ಥಳಗಳ ಪಟ್ಟಿ ಇಲ್ಲಿದೆ ನೋಡಿ.
ನೀಲಗಿರಿ,ತಮಿಳುನಾಡು
ನೀಲಗಿರಿ ಬೆಟ್ಟಗಳು ಅಥವಾ ಪಶ್ಚಿಮಘಟ್ಟಗಳ ಒಂದು ಭಾಗವಾಗಿರುವ ನೀಲಗಿರಿಯು ತಮಿಳುನಾಡಿನಲ್ಲಿದ್ದು, ಇದು ಕರ್ನಾಟಕ ಮತ್ತು ಕೇರಳದಲ್ಲಿ ತನ್ನ ಗಡಿಯನ್ನು ಹಂಚಿಕೊಂಡಿದೆ. ಊಟಿ, ಕೋಟಗಿರಿ ಮತ್ತು ಕೂನೂರ್ ತಮಿಳುನಾಡಿನ ಅತ್ಯಂತ ಪ್ರಸಿದ್ದ ಟ್ರೆಕ್ಕಿಂಗ್ ತಾಣಗಳಾಗಿವೆ. ಆಹ್ಲಾದಕರ ಹವಾಮಾನ, ಸೌಮ್ಯವಾದ ಇಳಿಜಾರುಗಳು ಚಾರಣಿಗರಿಗೆ ಸುಲಭವಾಗಿಸುತ್ತದೆ. ಇನ್ನ ಏಪ್ರಿಲ್ ನಿಂದ ಜೂನ್ ಸೆಪ್ಟೆಂಬರ್ ನಿಂದ ಡಿಸೆಂಬರ್ ನೀಲಗಿರಿ ಚಾರಣಕ್ಕೆ ಸೂಕ್ತ ಸಮಯವಾಗಿದೆ ಏಕೆಂದರೆ ಈ ಸಮಯದಲ್ಲಿ ತಾಪಮಾನವು ಬಿಸಿಯಾಗಿರುವುದಿಲ್ಲ ಅಥವಾ ತುಂಬಾ ತಂಪಾಗಿಯೂ ಇರುವುದಿಲ್ಲ.
ಕೂರ್ಗ್, ಕರ್ನಾಟಕ
ಕರ್ನಾಟಕದ ಕೂರ್ಗ್ ದಕ್ಷಿಣಭಾರತದಲ್ಲಿ ಟ್ರಕ್ಕಿಂಗ್ ಪ್ರವಾಸ ಮಾಡುವವರು ಹೆಚ್ಚಿನ ಮಟ್ಟದಲ್ಲಿ ಆಯ್ಕೆ ಮಾಡುವ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಕೂರ್ಗ್, ಮಳೆಗಾಲದ ತಿಂಗಳುಗಳಾದ ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳ ಹೊರತಾಗಿ ಬೇರೆ ಸಮಯದಲ್ಲಿ ಅನುಕೂಲಕರ ಹವಾಮಾನವನ್ನು ಹೊಂದಿರುತ್ತದೆ. ಜನವರಿಯಿಂದ ಮಾರ್ಚ್ ವರೆಗಿನ ತಿಂಗಳುಗಳು ಇಲ್ಲಿಗೆ ಭೇಟಿಗೆ ಸೂಕ್ತವಾದಂತಹ ಸಮಯವಾಗಿರುತ್ತದೆ. ಬ್ರಹ್ಮಗಿರಿ ಶ್ರೇಣಿಗಳು ಮತ್ತು ಪುಷ್ಪಗಿರಿ ರಜಾದಿನಗಳಲ್ಲಿ ಟ್ರಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳವಾಗಿದೆ. ಇರುಪ್ಪು ಜಲಪಾತಗಳು ಅಬ್ಬೇ ಜಲಪಾತಗಳು ತಾಡಿಯಾಂಡಮೋಲ್ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಇವೆಲ್ಲವೂ ಟ್ರಕ್ಕಿಂಗ್‌ಗೆ ಸೂಕ್ತವಾದ ಸ್ಥಳಗಳಾಗಿವೆ. ಆದರೆ ಇಲ್ಲಿ ಟ್ರಕ್ಕಿಂಗ್ ಮಾಡುವಾಗ ಹವಾಮಾನ ಪರಿಸ್ಥಿತಿಗಳು ಮತ್ತು ವಿವಿಧ ಸರೀಸೃಪಗಳು ಮತ್ತು ಕೀಟಗಳ ದಾಳಿಯ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ/.
ಪೀರ್ಮೆಡೆ, ಕೇರಳ
ಪ್ರವಾಸಿಗರು ಪೀರ್ಮೆಡೆಯನ್ನು ಕೇವಲ ಆ ಸ್ಥಳದ ಸೌಂದರ್ಯತೆಯ ಅನ್ವೇಷಣೆಗೆ ಮಾತ್ರವಲ್ಲದೆ ಚಾರಣಕ್ಕಾಗಿಯೂ ಭೇಟಿ ಕೊಡುತ್ತಾರೆ. ಇಲ್ಲಿ ಇನ್ನಿತರ ಸಾಹಸಿ ಚಟುವಟಿಕೆಗಳಾದ ಪ್ಯಾರಾಗೈಡ್ಲಿಂಗ್, ಕುದುರೆ ಸವಾರಿ ಮತ್ತು ಸೈಕ್ಲಿಂಗ್ ಕೂಡಾ ಆನಂದಿಸಬಹುದಾಗಿದೆ. ಕುಟ್ಟಿಕನಮ್, ಕಲ್ಥೊಟ್ಟಿ ಮತ್ತು ವಾಗಮೊನ್ ಕೂಡಾ ಪೀರ್ಮಡೆಗೆ ಹತ್ತಿರವಿರುವ ರಜಾದಿನಗಳನ್ನು ಕಳೆಯುವ ಟ್ರಕ್ಕಿಂಗ್ ಸ್ಥಳವೆಂದು ಗುರುತಿಸಿಕೊಳ್ಳಬಹುದಾಗಿದೆ. ಪೀರ್ಮಡೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪೀರು ಬೆಟ್ಟಗಳು ಕೂಡಾ ಸಾಹಸ ಚಾರಣದ ತಾಣವಾಗಿದೆ. ಏಪ್ರಿಲ್-ಜೂನ್ ಮತ್ತು ಸೆಪ್ಟೆಂಬರ್-ನವೆಂಬರ್ ಈ ಟ್ರೆಕ್ಕಿಂಗ್ ಪ್ರವಾಸಕ್ಕೆ ಸೂಕ್ತ ಸಮಯ.
ಮುನ್ನಾರ್, ಕೇರಳ
ಮುನ್ನಾರ್ ದಕ್ಷಿಣ ಭಾರತದ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾಗಿದ್ದು ಇದು ಕೇರಳದ ಅತ್ಯಂತ ಪ್ರಮುಖವಾದ ಟ್ರಕ್ಕಿಂಗ್ ತಾಣವಾಗಿದೆ. ಮುನ್ನಾರ್ ನ ಬೆಟ್ಟಗಳ ಒಂದು ಮಾರ್ಗದಿಂದ ಚಾರಣ ಮಾಡುತ್ತಾ ಇನ್ನೊಂದು ಕಡೆಯ ದೃಶ್ಯಗಳನ್ನು ತೆರೆದಿಡುತ್ತದೆ. ಅಂಕುಡೊಂಕಾದ ಮಾರ್ಗಗಳು ಮತ್ತು ಚಹಾ ತೋಟಗಳ ನಡುವೆ ಟ್ರೆಕ್ಕಿಂಗ್ ರಜಾದಿನಗಳು ಪ್ರವಾಸವನ್ನು ಸ್ಮರಣೀಯ ಅನು1ಭವವನ್ನು ನೀಡುತ್ತದೆ. ಅನಮುಂಡಿಯು ಮುನ್ನಾರ್‌ನ ಅತಿ ಎತ್ತರದ ಶಿಖರವಾಗಿದೆ ಮತ್ತು ಚಾರಣಿಗರು ಹೆಚ್ಚು ಆದ್ಯತೆ ನೀಡುವಂತಹ ತಾಣವಾಗಿದೆ. ಚಹಾ ತೋಟದ ನಡುವೆ ಟ್ರೆಕ್ಕಿಂಗ್ ರಜಾದಿನಗಳು ನಿಮಗೆ ಅವಿಸ್ಮರಣೀಯ ಅನುಭವವಾಗಿ ಉಳಿಯುತ್ತದೆ.
ಪೈತಲಮಾಲ, ಕೇರಳ
ಕೇರಳದ ಕಣ್ಣೂರು ಜಿಲ್ಲೆಯಲ್ಲಿದೆ. ಪೈತಲಮಲ ಕರ್ನಾಟಕದ ಗಡಿಯನ್ನು ಹಂಚಿಕೊಂಡಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವುದರಿಂದ, ಗುಡ್ಡಗಾಡು ಪ್ರದೇಶವು ಛಾಯಾಗ್ರಾಹಕರು, ಪ್ರಕೃತಿ ಪ್ರಿಯರು ಮತ್ತು ಚಾರಣಿಗರನ್ನು ಆಕರ್ಷಿಸುತ್ತದೆ. ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರು. ಪೈತಾಲಮಾಲಾವನ್ನು ಜೂನ್-ಅಕ್ಟೋಬರ್ ಅಥವಾ ಜನವರಿ-ಮಾರ್ಚ್ ನಡುವೆ ಚಾರಣ ಮಾಡಬಹುದು. ಜಿಗಣೆಗಳು ಮತ್ತು ಆನೆಗಳು ಈ ಸ್ಥಳದ ಸಾಮಾನ್ಯವಾಗಿ. ಬೆಟ್ಟದ ತುದಿಯಲ್ಲಿರುವ ವೀಕ್ಷಣಾಲಯದ ಗೋಪುರವು ಕಣಿವೆಯ ಇಳಿಜಾರಿನ ವಿಹಂಗಮ ನೋಟವನ್ನು ನೀಡುತ್ತದೆ. ನೀವು ಗೋಪುರವನ್ನು ತಲುಪಿದ ನಂತರ ದಟ್ಟವಾದ ಕಾಡು ಪ್ರಾರಂಭವಾಗುತ್ತದೆ. ಪೈತಲ್ಮಲಾಗೆ ಟ್ರೆಕ್ಕಿಂಗ್ ಪ್ರವಾಸವನ್ನು ಯೋಜಿಸಲು ಮುಂಜಾನೆ ಸೂಕ್ತ ಸಮಯ.
ಸುಂದರ ಪ್ರಕೃತಿ ಭೂಮಿಯನ್ನ ಸ್ವರ್ಗವನ್ನಾಗಿಸುತ್ತದೆ, ಇಂತಹ ಭೂರಮೆಯ ಐಸಿರಿಯಲ್ಲಿ ಮೈಮರೆತು ತನುಮನವನ್ನ ಪುಳಕಿತಗೊಳಿಸಿಕೊಳ್ಳುವ ಆಸೆ ನಿಮಗೂ ಇದ್ದರೆ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ನೀವೂ ಕೂಡ ಚಾರಣ ಕೂಳ್ಳಬಹುದಾಗಿದೆ.
ವಿನುತಾ ಹೆಚ್.ಎಲ್ ಡಿಜಿಟಲ್ ಸಮಯ ನ್ಯೂಸ್.
Post a comment
Log in to write reviews