ಬಿಸಿಲಿನ ಬೇಗೆ ತಾಳಲಾರದೆ ಮಳೆರಾಯನ ಮೊರೆಹೋಗಲು ಹುಡುಗನಿಗೆ ಸೀರೆ ತೊಡಿಸಿ ಮೆರವಣಿಗೆ ಮಾಡಲಾಗಿದೆ. ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶವಿದ್ದು ಬಿಸಿಲ ಬೇಗೆಗೆ ಜನರು ತತ್ತರಿಸಿದ್ದಾರೆ. ಪರಿಹಾರಕ್ಕಾಗಿ ಗ್ರಾಮಸ್ಥರೆಲ್ಲ ಸೇರಿ ವರುಣದೇವರ ಮೊರೆಹೋಗಲು ವಿಶೇಷ ಪೂಜೆಗೆ ತೀರ್ಮಾನಿಸಿದ್ದಾರೆ.
ಮೇ 6 ರಂದು ಪ್ರಮುಖ ಬೀದಿಗಳಲ್ಲಿ ಹುಡುಗನಿಗೆ ಸೀರೆ ತೊಡಿಸಿ, ಮತ್ತೊಬ್ಬರು ಬಸಪ್ಪ ವಿಗ್ರಹ ತಲೆ ಮೇಲೆ ಇಟ್ಟುಕೊಂಡು ನೇಗಿಲು ಹಿಡಿದು ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಪ್ರತಿ ಮನೆಯಲ್ಲೂ, ಮಹಿಳೆಯರು ನೀರು ಹಾಕಿ ತಣ್ಣನೆ ಮಾಡಿದರೆ ಮಳೆರಾಯ ಬರುತ್ತಾನೆಂಬ ನಂಬಿಕೆಯಿಂದ ಈ ಆಚರಣೆ ನಡೆಸಲಾಗುತ್ತದೆ. ಅಲ್ಲದೆ ಈ ಹಿಂದೆ ನಮ್ಮ ಅಜ್ಜ ಅಜ್ಜಿಯಂದಿರು ಮಳೆ ಬರದಿದ್ದರೆ ಈ ರೀತಿ ಪೂಜೆ ಮಾಡುತ್ತಿದ್ದರೆಂದು ಗ್ರಾಮಸ್ಥರು ಹೇಳಿದರು.
Post a comment
Log in to write reviews