ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಆಪಲ್ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಯಾವುದೋ ಒಂದು ಹಂತದಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಬಳಸಿಯೇ ಇರುತ್ತೀರಿ. ಹೆಚ್ಚಿನ ಜನರು ಈ ವೈಶಿಷ್ಟ್ಯವನ್ನು ವಿಮಾನದಲ್ಲಿ ಕುಳಿತಾಗ ಮಾತ್ರ ಬಳಸುತ್ತಾರೆ ಎಂದು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ನೆಟ್‌ವರ್ಕ್‌ನಿಂದ ಸಂಪರ್ಕ ಕಡಿತಗೊಳಿಸಲು ಮಾತ್ರವಲ್ಲದೆ ಅನೇಕ ಇತರ ದೊಡ್ಡ ಪ್ರಯೋಜನಗಳನ್ನು ಹೊಂದಿದೆ. ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಏರ್‌ಪ್ಲೇನ್ ಮೋಡ್ ಅನ್ನು ಏರ್ ಮೋಡ್ ಎಂದೂ ಕರೆಯಲಾಗುತ್ತದೆ. ಇದು ಅನೇಕ ಸಂದರ್ಭಗಳಲ್ಲಿ ನಮಗೆ ತುಂಬಾ ಉಪಯುಕ್ತವಾಗಿದೆ. ಇದು ನೆಟ್‌ವರ್ಕ್ ಜೊತೆಗೆ ಮೊಬೈಲ್‌ನಲ್ಲಿರುವ ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕಗಳನ್ನು ಆಫ್ ಮಾಡುತ್ತದೆ. ಇದರ ಇತರ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.
- ಫೋನ್‌ನಲ್ಲಿ ಜಾಹೀರಾತುಗಳನ್ನು ತೊಡೆದುಹಾಕಲು ಏರ್‌ಪ್ಲೇನ್ ಮೋಡ್ ನಮಗೆ ಸಹಾಯ ಮಾಡುತ್ತದೆ. ಅನೇಕ ಬಾರಿ, ನೀವು ಆಫ್‌ಲೈನ್ ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ ಆ್ಯಡ್ ಕಾಣಿಸಿಕೊಳ್ಳುತ್ತದೆ (ಉದಾ: ಗೇಮ್ ಆಡುವಾಗ). ಆಗ ನೀವು ಏರ್‌ಪ್ಲೇನ್ ಮೋಡ್‌ನೊಂದಿಗೆ ಯಾವುದೇ ಆ್ಯಪ್ ರನ್ ಮಾಡಿದರೆ, ಜಾಹೀರಾತುಗಳು ಗೋಚರಿಸುವುದಿಲ್ಲ.
- ಫೋನ್‌ನ ಏರ್‌ಪ್ಲೇನ್ ಮೋಡ್ ಬ್ಯಾಟರಿ ಬಳಕೆಯನ್ನು ಉಳಿಸುತ್ತದೆ ಎಂದರೆ ನಂಬಲೇಬೇಕು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಏರ್‌ಪ್ಲೇನ್ ಮೋಡ್ ಆನ್ ಮಾಡಿ ಬಳಸಿದರೆ, ನಿಮ್ಮ ಬ್ಯಾಟರಿ ಹೆಚ್ಚು ಸಮಯ ಚಾರ್ಜ್ ಬರುತ್ತದೆ. ಸಾಮಾನ್ಯವಾಗಿ ಫೋನ್ ನಿರಂತರವಾಗಿ ನೆಟ್‌ವರ್ಕ್‌ಗಳನ್ನು ಹುಡುಕುವ ಕ್ರಿಯೆಯಲ್ಲಿ ತೊಡಗಿಕೊಂಡಿರುತ್ತದೆ. ಆಗ ಚಾರ್ಜ್ ಕೂಡ ಕಡಿಮೆ ಆಗುತ್ತದೆ. ಅದೆ ನೀವು ಏರ್‌ಪ್ಲೇನ್ ಮೋಡ್ ಆನ್ ಮಾಡಿದರೆ ಇದು ನಿಮ್ಮ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ.
- ಹಾಗೆಯೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳನ್ನು ಸರಿಪಡಿಸಲು ಏರ್‌ಪ್ಲೇನ್ ಮೋಡ್ ಅನ್ನು ಬಳಸಲಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ನಲ್ಲಿ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ ಎಂದಾದರೆ ಒಮ್ಮೆ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ಮತ್ತು 2 ನಿಮಿಷಗಳ ನಂತರ ಅದನ್ನು ಆಫ್ ಮಾಡಿ. ಇದರ ಸಹಾಯದಿಂದ ನೀವು ನಿಮ್ಮ ಫೋನ್ನಲ್ಲಿ ನೆಟ್ವರ್ಕ್ ಸರಿಪಡಿಸಬಹುದು.
- ಇನ್ನು ಏರ್‌ಪ್ಲೇನ್ ಮೋಡ್ ಆನ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಬಹುದು. ಈ ರೀತಿ ಮಾಡಿ ಚಾರ್ಜ್ಗಿಟ್ಟರೆ, ಫೋನ್ ಸುಮಾರು 20-30 ಪ್ರತಿಶತದಷ್ಟು ವೇಗವಾಗಿ ಚಾರ್ಜ್ ಆಗುತ್ತದೆ.
- ವಿದ್ಯುತ್ಕಾಂತೀಯ ವಿಕಿರಣದ ಅಪಾಯ ಹೆಚ್ಚಿರುವ ಸ್ಥಳಗಳಲ್ಲಿ ಸ್ಮಾರ್ಟ್‌ಫೋನ್‌ನ ಏರ್‌ಪ್ಲೇನ್ ಮೋಡ್ ತುಂಬಾ ಉಪಯುಕ್ತವಾಗಿದೆ. ಆದ್ದರಿಂದ, ನೀವು ಅಂತಹ ಅಪಾಯವಿರುವ ಸ್ಥಳದಲ್ಲಿದ್ದರೆ, ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿದರೆ ಉತ್ತಮ.
- ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣವು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅಗತ್ಯವಿಲ್ಲದ ಸಂದರ್ಭದಲ್ಲಿ ಫೋನ್ ಅನ್ನು ಫ್ಲೈಟ್ ಮೋಡ್ ಇಡುವ ಮೂಲಕ, ಈ ವಿಕಿರಣವು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುವುದನ್ನು ಕಡಿಮೆ ಮಾಡಬಹುದು.
Post a comment
Log in to write reviews