ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಪ್ರಾಯಾಣಿಸುವ ಪ್ರಯಾಣಿಕರೆ ಎಚ್ಚರ, ಸಂಚಾರಿ ನಿಯಮ ಪಾಲಿಸದಿದ್ದರೆ ಮುಲಾಜಿಲ್ಲದೆ ಬೀಳುತ್ತೆ ದಂಡ. ಮೈಸೂರು- ಬೆಂಗಳೂರು ಹೆದ್ದಾರಿ ಸಂಚಾರಿ ಪೊಲೀಸರು ಕೇವಲ 16 ದಿನಗಳಲ್ಲೇ ಬರೋಬ್ಬರಿ 12,192 ಕೇಸ್ ದಾಖಲಿಸಿದ್ದಾರೆ.
ಮೇ 1ರಿಂದ 16ರವರೆಗೆ ಹಾಕಿರುವ ಕೇಸ್ ಬಗ್ಗೆ ಮಾಹಿತಿ ಹಂಚಿಕೊಂಡ ಎಡಿಜಿಪಿ ಅಲೋಕ್ ಕುಮಾರ್. ಎಐ ಟೆಕ್ನಾಲಜಿ ಒಳಗೊಂಡ ಕ್ಯಾಮರಾಗಳ ಮೂಲಕ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅತಿ ವೇಗ, ಸೀಟ್ ಬೆಲ್ಟ್ ಹಾಕದೆ ಪ್ರಯಾಣ, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ನಿರ್ಬಂಧಿತ ವಾಹನಗಳ ಸಂಚಾರ ಸೇರಿದಂತೆ ಎಲ್ಲ ರೀತಿಯ ನಿಯಮ ಉಲ್ಲಂಘನೆಗೂ ಕೇಸ್ ಹಾಕಲಾಗಿದೆ. ಎಐ ಕ್ಯಾಮರಾ ಇಮೇಜ್ ಆಧಾರದ ಮೇಲೆ ನೋಟಿಸ್ ಜಾರಿಗೊಳಿಸಿದ್ದು, ನೋಟಿಸ್ ತಲುಪಿದ 7 ದಿನಗಳಲ್ಲಿ ಸಂಬಂಧಪಟ್ಟ ಸಂಚಾರ ಠಾಣೆಗೆ ಹೋಗಿ ಫೈನ್ ಕಟ್ಟೋದು ಅನಿವಾರ್ಯ,ಇಲ್ಲವಾದ್ರೆ 6 ತಿಂಗಳು ಜೈಲು ಶಿಕ್ಷೆ ಅಥವಾ 5000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಗಂಟೆಗೆ 60ರಿಂದ 100 ಕಿ.ಮೀ. ಗರಿಷ್ಠ ವೇಗ ಮಿತಿಯಲ್ಲಿ ಸಂಚಾರ ಮಾಡಲು ಸೂಚಿಸಿರುವ ಪೊಲೀಸರು. ಸ್ವಲ್ಪ ಯಾಮಾರಿದ್ರೂ ಕೇಸ್ ಬೀಳೋದು ಫಿಕ್ಸ್ ಎಂದು ತಿಳಿಸಿದರು.
ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ದುಬಾರಿ ಟೋಲ್ ಜತೆಗೆ ಕೇಸ್ ಎಚ್ಚರಿಕೆಯಲ್ಲೇ ಟ್ರಾವಲ್ ಮಾಡುವ ಅನಿವಾರ್ಯತೆ.
Tags:
- bengaluru mysuru expressway
- national highways
- traffic rule violations
- coronavirus rule violation
- bengaluru coronavirus
- types of organization structures
- covid rule violation
- traffic violation
- centralization vs decentralization
- new traffic violations fines
- bangalore international centre
- traffic penalties
- bengaluru
- samayanews
- samayadigital
Post a comment
Log in to write reviews