ಇತ್ತೀಚಿನ ದಿನಗಳಲ್ಲಿ18 ವರ್ಷ ಒಳಪಟ್ಟ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಸೇರಿದಂತೆ ಹಲವು ದೌರ್ಜನ್ಯಗಳು ನಡೆಯುವುದು ಹೆಚ್ಚಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಂಬಿಕಸ್ಥ ವ್ಯಕ್ತಿಗಳಿಂದಲೇ ಇಂತಹ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅತಹ ದೌರ್ಜನ್ಯವನ್ನು ತಡೆಯಲು ಪೋಕ್ಸೋ ಕಾಯ್ದೆಯನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಪೋಕ್ಸೋ ಕಾಯ್ದೆ ಎಂದರೇನು ಇದರ ಪ್ರಕ್ರಿಯೆ ಹೇಗಿರುತ್ತದೆ ಇದರಲ್ಲಿ ಬರುವ ಶಿಕ್ಷೆಗಳಾವುವು ಎಂಬುದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ ನೋಡಿ.
ಪೋಕ್ಸೋ ಕಾಯ್ದೆ ಎಂದರೇನು?
ಲೈಂಗಿಕ ಹಾಗೂ ಎಲ್ಲಾ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವುದೇ ಪೋಕ್ಸೋ ಕಾಯ್ದೆ ಆಗಿದೆ.
ಈ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಯಿತು.POCSO ಅಂದರೆ The Protection of Children from Sexual Offences ಅಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ ಎಂದರ್ಥ.
18 ವರ್ಷ ಕೆಳಪಟ್ಟ ಯಾವುದೇ ಮಕ್ಕಳು ಅಂದರೆ ಹುಡುಗ ಅಥವಾ ಹುಡುಗಿಯನ್ನು ಮಗು ಎಂದು ಕರೆಯಲಾಗುತ್ತದೆ. ಅಂತಹವರ ಮೇಲೆ ಲೈಂಗಿಕ ದೌರ್ಜನ್ಯ ಮಾಡುವುದಾಗಲಿ ಮಕ್ಕಳ ಅಶ್ಲೀಲ ಚಿತ್ರಣವನ್ನು ಚಿತ್ರೀಕರಿಸುವುದಾಗಲೀ ಅದನ್ನು ನೋಡುವುದಾಗಲಿ ಮಾಡಿದರೆ ಅಂತಹವರ ವಿರುದ್ದ ಫೋಕ್ಸೋ ಕಾಯ್ದೆಯಡಿ ದೂರನ್ನು ದಾಖಲಿಸಲಾಗುತ್ತದೆ.
ಇತರೆ ಕೇಸ್ ತರಹ ಆರೋಪ ಸಾಬೀತಾಗುವ ವರೆಗೆ ಆತನನ್ನು ನಿರಪರಾಧಿ ಎಂದು ಈ ಕೇಸ್ ನಲ್ಲಿ ಪರಿಗಣಿಸಲಾಗುವುದಿಲ್ಲ. ಆತನ ಮೇಲೆ ಯಾವಾಗ ಪೋಕ್ಸೋ ಕೇಸ್ ಆಗುತ್ತೋ ಆತ ಆಗ ಅಪರಾಧಿಯಾಗಿರುತ್ತಾನೆ. ಒಂದು ವೇಳೆ ೧೮ ವರ್ಷದ ಒಳಗಿನ ಯುವಕ ಹಾಗೂ ಯುವತಿಯರೊಂದಿಗೆ ಒಪ್ಪಿಗೆಯ ಲೈಂಗಿಕ ಕ್ರಿಯೆ ನಡೆಸಿದರೂ ಅದನ್ನು ಅತ್ಯಾಚಾರವೆಂದೇ ಪರಿಗಣಿಸಲಾಗುವುದು.
ಈ ಕಾಯ್ದೆಯಡಿಯ ಶಿಕ್ಷೆಗಳು.
ಈ ಕಾಯ್ದೆಯಲ್ಲಿ ಯಾವುದೇ ಲಿಂಗ ಬೇದ ಇರುವುದಿಲ್ಲ ೧೮ ವರ್ಷದ ಒಳಗಿನ ಯವಕ ಯುವತಿಯರನ್ನು ಸಮನಾಗಿ ಕಾಣಲಾಗುತ್ತದೆ. ಈ ಕೇಸ್ ಗೆ ಜಾಮೀನು ಇರುವುದಿಲ್ಲ. 2019 ರಲ್ಲಿ ತಿದ್ದುಪಡಿ ಮಾಡಿ ಈ ಕಾನೂನನ್ನು ಇನ್ನೂ ಕಠಿಣ ಮಾಡಲಾಗಿದೆ, ಈ ಕಾಯ್ದೆಯಲ್ಲಿ ವಿವಿದ ಅಪರಾಧಗಳಲ್ಲಿ ಈ ಕಾಯ್ದೆಯಲ್ಲಿ ಹಲವು ರೀತಿಯ ಶಿಕ್ಷೆ ಅಂದರೆ ದಂಡ ಹಾಕಿ ಬಿಡುವುದರಿಂದ ಹಿಡಿದು ಅಜೀವ ಕಾರಾಗೃಹ ಶಿಕ್ಷೆ ಯನ್ನೂ ನೀಡಬಹುದು.
ಈ ಕಾಯ್ದೆ ಮಾಧ್ಯಮಗಳಿಗೂ ಅನ್ವಯ
ದಾಖಲಿಸಿಕೊಳ್ಳುವಾಗ ಆ ಮಗುವಿನ ಹೇಳಿಕೆಯನ್ನು ಪೊಲೀಸ್ ಅಧಿಕಾರಿಗಳ ಮೂಲಕ ದಾಖಲಿಸಿಕೊಳ್ಳಬೇಕಾಗುತ್ತದೆ. ಆದರೆ ಪೊಲೀಸ್ ಆ ಮಗುವಿನ ಹೇಳಿಕೆಯನ್ನು ಕೇಳುವಾಗ ಯೂನಿಫಾರಂ ಅನ್ನು ಹಾಕಿಕೊಳ್ಳುವಂತಿಲ್ಲ. ಕಾರಣ ಮಗು ಯುನಿಫಾರಂ ನೋಡಿ ಭಯಪಡುವ ಸಾಧ್ಯತೆಗಳಿರುತ್ತದೆ. ಈ ಸಮಯದಲ್ಲಿ ಪ್ರಮುಖವಾಗಿ ಮಕ್ಕಳ ರಕ್ಷಣೆಮಾಡುವುದು ಮುಖ್ಯವಾಗುತ್ತದೆ. ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಪೊಲೀಸರು ವಿಷಯವನ್ನು ಮಕ್ಕಳ ಆಯೋಗಕ್ಕೆ ತಿಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಮಗುವಿನ ಹೆಸರು ಸ್ಥಳ ಹಾಗೂ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸುವಂತಿಲ್ಲ ಇದು ಮಾಧ್ಯಮಗಳಿಗೂ ಅನ್ವಯವಾಗುತ್ತದೆ.
Post a comment
Log in to write reviews